ಹೊಸದಿಲ್ಲಿ:
ಭಾರತೀಯ ವಾಯು ಪಡೆ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿರುವ ಮಿಗ್ 21 ಪೈಲಟ್ ಅಭಿನಂದನ್ ಅವರು ಪಾಕಿಸ್ಥಾನ ಸೇನೆಯ ವಶದಲ್ಲಿ ಸುರಕ್ಷಿತವಾಗಿದ್ದಾರೆ. ಈ ಸಂಬಂಧ ವಿಡಿಯೋವೊಂದು ಹರಿದಾಡುತ್ತಿದ್ದು, ಅಭಿನಂದನ್ ಅವರು ಕಪ್ನಲ್ಲಿ ಚಹಾ ಸೇವಿಸುತ್ತಾ ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ. ಪಾಕ್ನಲ್ಲಿ ಸೇನೆ ವಿಮಾನ ಹೊಡೆದುರುಳಿಸಿದ ಬಳಿಕ ಅಭಿನಂದನ್ ಅವರನ್ನು ಗ್ರಾಮಸ್ಥರು ಮುತ್ತಿಗೆ ಹಾಕಲು ಮುಂದಾದಾಗ ಸೇನೆ ರಕ್ಷಿಸಿ ವಶಕ್ಕೆ ಪಡೆದಿದ್ದು, ಸುರಕ್ಷಿತವಾಗಿ ನೋಡಿಕೊಂಡಿದೆ ಎಂದು ಅಭಿನಂದನ್ ಅವರ ಹೇಳಿಕೆಯಿಂದ ತಿಳಿದು ಬಂದಿದೆ……