ಬೆಂಗಳೂರು:
ಫನಿ ಚಂಡಮಾರುತದ ಎಫೆಕ್ಟ್ ರಾಜ್ಯದಲ್ಲಿ ಜೋರಾಗ್ತಿದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಬಿದ್ದಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಆರಂಭವಾದ ಮಳೆಯು ತಡರಾತ್ರಿವರೆಗೂ ಸುರಿಯಿತು. ಇದ್ರಿಂದ ಕಾಂಪೌಂಡ್, ಭಾರೀ ಗಾತ್ರದ ಮರಗಳು ಉರುಳಿ ಬಿದ್ದರೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಇನ್ನು ಗರುಡಾಚಾರ್ ಪಾಳ್ಯದ ಗೋಶಾಲೆ ಮುಖ್ಯರಸ್ತೆಯಲ್ಲಿ ಹಸೆ ಮಣೆ ಏರಬೇಕಿದ್ದ ಯುವಕ ಮಳೆ ಹೊಡೆತಕ್ಕೆ ಬಲಿಯಾಗಿದ್ದಾನೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಶಿವಕೈಲಾಸ ರೆಡ್ಡಿ ಎಂಬುವರ ಮೇಲೆ ಕಾಂಪೌಂಡ್ ಬಿದ್ದಿದೆ. ಬೌರಿಂಗ್ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಆತ ಸಾವನ್ನಪ್ಪಿದ್ದಾರೆ. ಆಂಧ್ರದ ಪ್ರಕಾಶಂ ಜಿಲ್ಲೆಯ ರೆಡ್ಡಿಗೆ 15 ದಿನದಲ್ಲಿ ಮದುವೆ ಆಗಬೇಕಿತ್ತು.
ಬೆಂಗಳೂರು ಅಲ್ಲದೇ ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿದು ಹಾನಿಯಾಗಿದೆ. ತುಮಕೂರಿನ ತಿಪಟೂರು ತಾಲೂಕಿನಲ್ಲಿ ಕೋಳಿ ಫಾರಂ ನೆಲಸಮವಾಗಿ ನೂರಾರು ಕೋಳಿ ಸತ್ತಿವೆ. ಪಾವಗಡದಲ್ಲಿ ಎರಡು ಹಸು ಸಿಡಿಲಿಗೆ ಬಲಿಯಾಗಿವೆ. ಕೊರಟಗೆರೆ ತಾಲೂಕಿನ ದುಗ್ಗೇನಹಳ್ಳಿಯಲ್ಲಿ ಮನೆಗಳ ಶೀಟ್ ಹಾರಿಹೋಗಿವೆ……