Breaking News

ಫ್ಯೂಚರ್‌-ಎಸ್‌ ಮಿನಿ ಎಸ್‌ಯುವಿ ಸಾಲಿಗೆ ಮತ್ತೂಂದು ಕಾರ್..!

2019ರಲ್ಲಿ ಫ್ಯೂಚರ್‌-ಎಸ್‌ ಕಾರು ಲಾಂಚ್.....

SHARE......LIKE......COMMENT......

ಆಟೋ ವರ್ಲ್ಡ್:

ಮಧ್ಯಮ ವರ್ಗದವರನ್ನೇ ಗುರಿಯಾಗಿಸಿಕೊಂಡು ಹೊಸ ಹೊಸ ವಾಹನ ತಯಾರಿಸುವ ಮಾರುತು ಸುಜುಕಿ, ಇದೀಗ ಫ್ಯೂಚರ್‌-ಎಸ್‌ ಎಂಬ ಹೊಸ ಕಾರನ್ನು ಉತ್ಪಾದಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಲಾಗಿರುವ ಈ ಕಾರು, ಉತ್ಪಾದನೆಯ ಹಂತದಲ್ಲೇ ಭಾರೀ ಸದ್ದು ಮಾಡಿದೆ.

ವಿನ್ಯಾಸದಲ್ಲಿ ಫ್ಯೂಚರ್‌-ಎಸ್‌ ಕಾರು ವಿಭಿನ್ನವಾಗಿದೆ. ಮೇಲ್ನೋಟಕ್ಕೆ, ಉಳಿದಾವ ಕಂಪನಿಯ ಕಾರುಗಳಿಗೂ ಹೋಲಿಕೆ ಮಾಡಿಕೊಳ್ಳುವಂತಿಲ್ಲ. ಆದರೆ, ಕೆಲವೊಂದು ಭಾಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಣ್ಣ-ಪುಟ್ಟ ಹೋಲಿಕೆಗಳು ಕಂಡುಬರುತ್ತವೆ. ಮಿನಿ ಎಸ್‌ಯುವಿ ಸೆಗ್ಮೆಂಟ್‌ನ ಈ ಕಾರು ಹ್ಯಾಚ್‌ಬ್ಯಾಕ್‌ ಮಾದರಿಗಿಂತಲೂ ಬೇರೆಯದೇ ಆದ ಔಟ್‌ಲುಕ್‌ ಹೊಂದಿದೆ. ಕಾರಿನ ಉದ್ದವನ್ನು ನಾಲ್ಕು ಮೀಟರ್‌ ಮೀರದಂತೆ ಜಾಣ್ಮೆಯಿಂದ ವಿನ್ಯಾಸಗೊಳಿಸಿದೆ.

ಫ್ರಂಟ್‌ ಲುಕ್‌ ಅನ್ನು ತಕ್ಷಣಕ್ಕೆ ಹಳೆಯ ಅಂಬಾಸಿಡರ್‌ ಕಾರನ್ನು, ಅಕ್ಕ-ಪಕ್ಕದಿಂದ ನೋಡಿದಾಗ ಸ್ವಿಫ್ಟ್ ಕಾರಿನ ಲುಕ್‌ ನೆನಪಿಸಬಹುದು. ಆದರೆ ಈ ಎರಡೂ ಕಾರುಗಳು ಮಿಶ್ರಣದಂತಿದೆ ಎಂದಾಗಲಿ, ಅವುಗಳ ತದ್ರೂಪಿನಂತಿದೆ ಎಂದಾಗಲಿ ಹೇಳುವಂತಿಲ್ಲ. ಸದ್ಯಕ್ಕಿರುವ ಮಾತಿಯಂತೆ ಕಾರಿನ ಒಳ ವಿನ್ಯಾಸ ಇತ್ತೀಚಿಗಿನ ಕಾರುಗಳಿಗೆ ಸ್ಪರ್ಧೆಯೊಡ್ಡುವಂತಿದೆ. ಚಾಲಕ ಸ್ನೇಹಿಯಾದ ತಂತ್ರಜ್ಞಾನ ಅಳವಡಿಕೆಯಲ್ಲೂ ಒಂದು ಹೆಜ್ಜೆ ಮುಂದುವರಿದೇ ವಿನ್ಯಾಸಗೊಳಿಸಿದೆ. ಇವೆಲ್ಲದರ ಜತೆಗೆ ಅಲಾಯ್‌ ವೀಲ್‌ಗಳು ಈ ಕಾರ್‌ ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

 ಫ್ಯೂಚರ್‌-ಎಸ್‌ ಕಾರು ಗಾತ್ರದಲ್ಲಿ ಚಿಕ್ಕದೆನಿಸಿದರೂ, ಸಾಮರ್ಥ್ಯದ ಎಂಜಿನ್‌ ಒದಗಿಸುವುದರಲ್ಲಿ ಮಾರುತಿ ಸುಜುಕಿ ತನ್ನ ಎಂದಿನ ಸ್ಟ್ಯಾಂಡರ್ಡ್‌ನಲ್ಲಿ ರಾಜಿ ಮಾಡಿಕೊಂಡಿಲ್ಲ. 1.2ಲೀಟರ್‌ ಜತೆ 1200ಸಿಸಿ ಪೆಟ್ರೋಲ್‌ ಎಂಜಿನ್‌ ಅಳವಡಿಸಿದೆ. ಅಷ್ಟೇ ಅಲ್ಲ, ಗ್ರಾಹಕರ ಅಪೇಕ್ಷೆಯ ಮೇರೆಗೆ ಮುಂಬರುವ ದಿನಗಳಲ್ಲಿ ಬ್ಯಾಟರಿ ಚಾಲಿತ ವ್ಯವಸ್ಥೆಯ ವೇರಿಯಂಟ್‌ ಕೂಡ ಪರಿಚಯಿಸುವುದಾಗಿ ಕಂಪನಿ ಹೇಳಿಕೊಂಡಿದೆ.

 ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ ಫ್ಯೂಚರ್‌ ಎಸ್‌ ಕಾರನ್ನು 2019ರಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದ ಬಳಿಕ ಸಿಕ್ಕಿರುವ ಫೀಡ್‌ಬ್ಯಾಕ್‌ ಪ್ರಕಾರ ಒಂದಿಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ….

 ಮಾರುಕಟ್ಟೆಯಲ್ಲಿ ಸದ್ಯಕ್ಕೆ ಚರ್ಚೆಯಾಗುತ್ತಿರುವ ಮಾಹಿತಿಯ ಪ್ರಕಾರ ಈ ಕಾರಿನ ಆರಂಭಿಕ ಬೆಲೆ 4.50 ಲಕ್ಷ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ…….