Breaking News

ಬಾಹುಬಲಿಗೆ ನಾಯಕಿಯಾಗಲು ದೀಪಿಕಾ ಗ್ರೀನ್​ ಸಿಗ್ನಲ್..!

ಕಥೆ ಕೇಳಿ ಮೆಚ್ಚಿರೋ ದೀಪಿಕಾ....

SHARE......LIKE......COMMENT......

ಬಾಲಿವುಡ್:

ಕಳೆದೊಂದು ದಶಕದಿಂದ ಬಾಲಿವುಡ್​ ಅಂಗಳದಲ್ಲಿ ಕಮಾಲ್ ಮಾಡ್ತಿರೋ ಬೆಡಗಿ ಕನ್ನಡತಿ ದೀಪಿಕಾ ಪಡುಕೋಣೆ. ತನ್ನ ಅಭಿನಯದ ಮೂಲಕ ಬಾಲಿವುಡ್​​ ರಾಣಿಯಾಗಿ ಮೆರೀತಿರೋ ಪದ್ಮಾವತಿ, ಸದ್ಯ ಪ್ರಭಾಸ್​ ಜೋಡಿಯಾಗಿ ನಟಿಸೋ ಮಾತುಗಳು ಕೇಳಿಬರ್ತಿದೆ. ಸಾಹೋ ಸಿನಿಮಾದಲ್ಲಿ ಸೋಲುಂಡ ಪ್ರಭಾಸ್​ ಸದ್ಯ ಜಾನ್​ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನಂತರ ಮಹಾನಟಿ ಸಿನಿಮಾ ಸಾರಥಿ ನಾಗ್​ ಅಶ್ವಿನ್​ ಸಾರಥ್ಯ ಚಿತ್ರದಲ್ಲಿ ಪ್ರಭಾಸ್​ ನಟಿಸೋದು ಪಕ್ಕಾ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಪಂಚ ಭಾಷೆಗಳಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದರಿಂದ ಬಾಲಿವುಡ್​​ ಟಾಪ್​ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ತಮ್ಮ ಕಥೆಗೆ ಆಲಿಯಾ ಭಟ್​ ಅಥವಾ ದೀಪಿಕಾ ಪಡುಕೋಣೆ ಬೇಕು ಅಂತಿದ್ದಾರೆ ನಿರ್ದೇಶಕ ನಾಗ್​ ಅಶ್ವಿನ್. ಈಗಾಗಲೇ ನಾಗ್​​​​ ಅಶ್ವಿನ್, ದೀಪಿಕಾ ಪಡುಕೋಣೆಗೆ ಕಥೆ ಹೇಳಿದ್ದಾರೆ. ಕಥೆ ಕೇಳಿ ಮೆಚ್ಚಿರೋ ದೀಪಿಕಾ ನಟಿಸೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ……