Breaking News

ಬಿಗ್‌ ಬಾಸ್ ಸೀಸನ್ 7 ಗ್ರ್ಯಾಂಡ್ ಒಪನಿಂಗ್..!

ಬಿಗ್ ಬಾಸ್​ ಮನೆಗೆ ಎಂಟ್ರಿಕೊಟ್ಟ ಸೆಲೆಬ್ರಿಟಿಗಳು....

SHARE......LIKE......COMMENT......

ಬೆಂಗಳೂರು: 

ಬಿಗ್‌ ಬಾಸ್ ಸೀಸನ್ 7 ಗ್ರ್ಯಾಂಡ್ ಒಪನಿಂಗ್ ಆಗಿದ್ದು,  ಮೊದಲ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಕುರಿಪ್ರತಾಪ್ ಎಂಟ್ರಿ ಕೊಟ್ಟಿದ್ದು,  ಮೊದಲ ದಿನವೇ ಬಿಗ್ ಬಾಸ್​ ಮನೆಯಲ್ಲಿ ಕುರಿ ಹಾಸ್ಯ ಪ್ರತಾಪ ತೋರಿಸಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಾಲಿಟ್ಟ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ, ನಾಲ್ಕನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಎಂಟ್ರಿಯಾಗಿದ್ದಾರೆ. ರಾಜರಾಣಿ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರ ಮೂಲಕ ಜನಪ್ರಿಯ ನಟಿ ವಾಸುಕಿ ವೈಭವ್‌ರನ್ನು  5ನೇ ಸ್ಪರ್ಧಿಯಾಗಿ  ಕಿಚ್ಚ ಸುದೀಪ್ ಬರಮಾಡಿಕೊಂಡರು.

ನಾಗಿಣಿ ಧಾರಾವಾಹಿಯ ನಟಿ ದೀಪಿಕಾ ದಾಸ್ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಸ್ಯಾಂಡಲ್​ವುಡ್​ನಲ್ಲಿ ನಟ, ನಿರ್ಮಾಪಕ ಜೈ ಜಗದೀಶ್ ಕಿರುತೆರೆಗೆ ಎಂಟ್ರಿಯಾಗಿದ್ದಾರೆ,  ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಅಕ್ಕಿ ಮಠದ ಸ್ವಾಮೀಜಿ  ಆಡಿಯೋ ಇದೀಗ ಅವರು ಕೂಡ ಬಿಗ್‌ ಬಿ ಮನೆಗೆ  ಆಗಮಿಸಿದ್ದಾರೆ. ಕಿನ್ನರಿ ಸೀರಿಯಲ್ ಖ್ಯಾತಿಯ ನಟಿ ಭೂಮಿ ಶೆಟ್ಟಿ ಬಿಗ್ ಬಾಸ್ 7ರಲ್ಲಿ ಭಾಗಿಯಾಗಿದ್ದು. ರಿಯಾಲಿಟಿ ಶೋ ಮೂಲಕ ಅದೃಷ್ಟ ಪರೀಕ್ಷೆಗಿಳಿದ ಯುವ ನಟಿ ಭೂಮಿ ಬಾಂಗಡೆ ಇಳಿದಿದ್ದಾರೆ. ಇವರು ಮೀನು ಇಲ್ಡೆ ಊಟ ಮಾಡಲ್ಲ,  ಬಾಲಿವುಡ್ ಕಿರುತೆರೆಯಲ್ಲಿ ಕನ್ನಡದ ಕೀರ್ತಿಪತಾಕೆ ಹಾರಿಸಿದ ಡಾನ್ಸರ್ ಕಿಶನ್ಹಿಂದೆ ಕನ್ನಡ ಕಿರುತೆರೆಯ ಡಾನ್ಸ್ ಶೋನಲ್ಲೂ ಈ ಯುವ ಪ್ರತಿಭೆ ಎಂಟ್ರಿಕೊಟ್ಟಿದ್ದಾರೆ.

11ನೇ ಸ್ಪರ್ಧಿಯಾಗಿ ದುನಿಯಾ ರಶ್ಮಿ ಮನೆಗೆ ಎಂಟ್ರಿಯಾಗಿದ್ದು , ‘ದುನಿಯಾ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದು  ಬಣ್ಣದ ಲೋಕದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದಾರೆ, ಇನ್ನೂ  ಬಿಗ್ ಬಾಸ್ ಮನೆಯಲ್ಲಿದ್ದಾರೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ಬಹುಮುಖ ಪ್ರತಿಭೆಯಾಗಿರುವ ಚಂದನ್ ಆಚಾರ್ ಇದ್ದಾರೆ. ಆರಂಭದಿಂದ ಬಿಗ್ ಬಾಸ್ ಪಟ್ಟಿಯಲ್ಲಿ ಕೇಳಿ ಬಂದಿದ್ದ ಸುಜಾತಾ ಕೊನೆಗೂ ಎಂಟ್ರಿಯಾಗಿದ್ದು, ರಾಧಾರಮಣ ಸೀರಿಯಲ್​ನಲ್ಲಿ ಖಳ ನಾಯಕಿಯಾಗಿ ಮಿಂಚಿದ್ದರು.

ತಮ್ಮದೇ ಶೈಲಿಯಲ್ಲಿ ಡೈಲಾಗ್ ಡೆಲಿವರಿ ಮಾಡುವ ಹಾಸ್ಯ ಕಲಾವಿದ ರಾಜು ತಾಳಿಕೋಟೆ ಎಂಟ್ರಿಯಾಗಿದೆ, ಮತ್ತು ಬಿಗ್ ಬಾಸ್‌ ಮನೆಯಲ್ಲಿದ್ದಾರೆ ಯುವ ನಿರೂಪಕಿ ಚೈತ್ರಾ ವಾಸುದೇವ್ ,  ಕೊನೆ ಘಳಿಗೆಯಲ್ಲಿ ಬರಹಗಾರ್ತಿ ಹಾಗೂ ನಟಿ ಚೈತ್ರ ಸಹ ಬಿಗ್ ಬಾಸ್​ ಮನೆಗೆ ಎಂಟ್ರಿಯಾಗಿದೆ.16 ನೇ ಸ್ಪರ್ಧಿಯಾಗಿ ಸೂಜಿದಾರ ಖ್ಯಾತಿಯ ಚೈತ್ರ ಕೊಟೂರು. 17 ನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿಯಾದ ನಟ ನಿರೂಪಕ ಶೈನ್‌ ಶೆಟ್ಟಿ,  ನಟ ಹರೀಶ್ ರಾಜ್ 18ನೇ ಸ್ಪರ್ಧಿಯಾಗಿ ಬಿಗ್‌ ಬಿ ಮನೆಗೆ ಬಂದಿದ್ದಾರೆ ಇವರು ಕನ್ನಡದಲ್ಲಿ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ……