ಲಂಡನ್:
ಬಿರುಗಾಳಿಯಂತಹ ಪ್ರತಿಕೂಲ ಸನ್ನಿವೇಶದಲ್ಲಿ ವಿಮಾನಗಳನ್ನು ಸುರಕ್ಷಿತವಾಗಿ ಕೆಳಗಿಳಿಸುವುದು ಸವಾಲಿನ ಕೆಲಸ. ತಾಂತ್ರಿಕ ತರಬೇತಿಯಲ್ಲಿ ಪಳಗಿದ ಪೈಲಟ್‌ಗಳು ಮಾತ್ರ ಗಾಳಿ ಬೀಸುವ ದಿಕ್ಕಿಗೆ ಅಡ್ಡವಾಗಿ ವಿಮಾನ ಇಳಿಸುವ ತಾಕತ್ತು ಪ್ರದರ್ಶಿಸಬಲ್ಲರು. ಬ್ರಿಟನ್‌ನ ಬ್ರಿಸ್ಟಲ್ ಏರ್‌ಪೋರ್ಟ್‌ನಲ್ಲಿ ಅಕ್ಟೋಬರ್ 12ರಂದು ಇಂತಹದ್ದೊಂದು ಸಾಹಸಮಯ ಲ್ಯಾಂಡಿಂಗ್ ಯಶಸ್ವಿಯಾಗಿದೆ..
TUI ಏರ್‌ವೇಸ್‌ನ 757-200 ವಿಮಾನ ಅ.12ರಂದು ಬ್ರಿಸ್ಟಲ್ ಏರ್‌ಪೋರ್ಟ್‌ಗೆ ಬಂದಿಳಿಯುವ ಸಂದರ್ಭದಲ್ಲಿ ‘ಕ್ಯಾಲಮ್’ ಬಿರುಗಾಳಿಯ ಅಬ್ಬರವಿತ್ತು. ಗಂಟೆಗೆ 77 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಆಗ ಪೈಲಟ್ ಒಂದು ನಿಮಿಷ ತಾಂತ್ರಿಕ ಕೌಶಲ್ಯ ಪ್ರದರ್ಶಿಸಿ ಗಾಳಿ ಚಲಿಸುತ್ತಿದ್ದ ದಿಕ್ಕಿಗೆ ಅಡ್ಡವಾಗಿ ರನ್‌ವೇನಲ್ಲಿ ವಿಮಾನ ಇಳಿಸಿ, ನಂತರ ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಅದರ ಪಥ ಬದಲಿಸಿ ಸುರಕ್ಷಿತವಾಗಿ ನಿಲ್ಲಿಸಿದರು.
ವಿಮಾನಯಾನದ ತಾಂತ್ರಿಕ ಪರಿಭಾಷೆಯಲ್ಲಿ ಇದಕ್ಕೆ ಕ್ರಾಸ್‌ವಿಂಡ್ ಲ್ಯಾಂಡಿಂಗ್, ಸೈಡ್‌ವೇಸ್ ಲ್ಯಾಂಡಿಂಗ್ ಎನ್ನಲಾಗುತ್ತದೆ. ಇಂತಹ ಲ್ಯಾಂಡಿಂಗ್ ವೇಳೆ ವಿಮಾನ ಗಾಳಿಯ ಒತ್ತಡಕ್ಕೆ ಓಲಾಡುತ್ತಿರುತ್ತದೆ. ಆರೋಗ್ಯ ಸಮಸ್ಯೆ ಎದುರಿಸುವ ಪ್ರಯಾಣಿಕರಿಗಂತೂ ಅತೀವ ಕಿರಿಕಿರಿಯಾಗುತ್ತಿರುತ್ತದೆ. ಸ್ವಲ್ಪ ಎಡವಟ್ಟಾದರೂ ವಿಮಾನದ ಕೆಳಭಾಗ ಘರ್ಷಣೆಗೆ ಒಳಗಾಗಿ ಸುಟ್ಟು ಭಸ್ಮವಾಗುವ ಅಪಾಯವಿರುತ್ತದೆ……