Breaking News

ಡಿಸೆಂಬರ್‌ನಲ್ಲಿ ‘KD’ ಸಿನಿಮಾ ರಿಲೀಸ್..!.

17 ಕೋಟಿ 70 ಲಕ್ಷಕ್ಕೆ ಆಡಿಯೋ ರೈಟ್ಸ್ ರೆಕಾರ್ಡ್ ...!

SHARE......LIKE......COMMENT......

ಸಿನಿಮಾ:

ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಜೋಡಿಯC ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಬಹಳ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಟೀಸರ್ ಬಿಟ್ಟು ಪ್ರೇಮ್ ಹೈಪ್ ಕ್ರಿಯೇಟ್ ಮಾಡಿದ್ದರು. ಸದ್ಯ ಬಹುತೇಕ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಸಿನಿಮಾ ಆಡಿಯೋ ಬಗ್ಗೆ ಕ್ರೇಜಿ ಅಪ್‌ಡೇಟ್ಸ್ ಸಿಕ್ಕಿದೆ.

ಕೆಡಿಯ ಬಹು ದೊಡ್ಡ ಶಕ್ತಿ ಮ್ಯೂಸಿಕ್. ಅದರಲ್ಲೂ ನಿರ್ದೆಶಕ ಜೋಗಿ ಪ್ರೆಮ್ ಸಿನಿಮಾ ಅಂದ್ರೆ ಕೇಳಬೇಕಾ ಕಥೆಯ ಜೊತೆಗೆ ಸಂಗೀತ ಕೂಡ ಪವರ್ ಫುಲ್ ಆಗಿರುತ್ತೆ. ಅದಕ್ಕೆ ತಕ್ಕಂತೆ ಕೆಡಿ ಗಾನ ಬಜಾನಕ್ಕೆ ಇಡೀ ಭಾರತೀಯ ಚಿತ್ರರಂಗವೇ ಬೇಡಿಕೆ ಇಟ್ಟಿದೆ. ಅದರ ಪ್ರತಿಫಲ ದಾಖಲೆ ಬೆಲೆಗೆ ಕೆಡಿ ಆಡಿಯೋ ಹಕ್ಕು ಮಾರಾಟ ಆಗಿದೆ ಈ ವಿಚಾರವನ್ನ ಕೆಡಿ ತಂಡವೇ ಬಹಿರಂಗ ಪಡಿಸಿದೆ.

ಕೆಡಿ ಆಡಿಯೋ ರೈಟ್ಸ್​ ದುಬಾರಿ ಬೆಲೆಯಲ್ಲಿ ಸೇಲ್​ ಆಗಿರೋ ಖುಷಿಯಲ್ಲಿ ಚಿತ್ರತಂಡ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿತ್ತು.. ‘ಅದು ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಇದು ದೊಡ್ಡ  ರೆಕಾರ್ಡ್ ಆಗಿದೆ. ಆನಂದ್ ಆಡಿಯೋ ಮ್ಯೂಸಿಕ್ ಕಂಪನಿ ಕೆಡಿ ಸಿನಿಮಾದ ಗಾನ ಬಜಾನಕ್ಕೆ ಬರೋಬ್ಬರಿ 17 ಕೋಟಿ 70 ಲಕ್ಷ ದುಡ್ಡ ಕೊಟ್ಟು ಕೊಂಡುಕೊಂಡಿದ್ದಾರೆ.

ಒಟ್ಟಾರೆಯಾಗಿ ಡಿಸೆಂಬರ್‌ನಲ್ಲಿ ‘KD’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ. ಎನಿವೇ ತೆರೆ ಮೇಲೆ ‘KD’ ‘ಅದ್ಧೂರಿ’ತನದಿಂದ ‘ಭರ್ಜರಿ’ಯಾಗಿ ‘ಪೊಗರಿ’ಸಂ ತೋರಿಸ್ತಾನಾ ಅಂತ ಕಾದುನೋಡ್​​ಬೇಕಾಗಿದೆ..