ಬೆಂಗಳೂರು:
ಬೆಂಗಳೂರು ಟು ಜಪಾನ್ ನಡುವೆ ಡೈರೆಕ್ಟ್ ಏರ್ಲೈನ್ಸ್ ಸೇವೆಯನ್ನ ಜಪಾನ್ ಏರ್ಲೈನ್ಸ್ ಲಿಮಿಟೆಡ್ (JAL) 2020ಕ್ಕೆ ಶುರುಮಾಡಲಿದೆ ಎಂದು ಜೆಎಎಲ್ ತಿಳಿಸಿದೆ.2020ರ ಬೇಸಿಗೆ ಅವಧಿಯಲ್ಲಿ ಬೆಂಗಳೂರು- ಟೋಕಿಯೋ ನಡುವೆ ತಡೆರಹಿತ ನೇರ ವಿಮಾನಗಳು ಜೆಎಎಲ್ ಸಂಸ್ಥೆಯಿಂದ ಹಾರಾಡಲಿವೆ.
ಬೆಂಗಳೂರು ಐಟಿ/ಬಿಟಿ ಹಬ್ ಎಂದು ಗುರುತಿಸಿಕೊಂಡಿದ್ದು, ಟೋಕಿಯೋದಿಂದ ನೇರ ವಿಮಾನ ಸಂಪರ್ಕ ಕಲ್ಪಿಸಿದರೆ ಎರಡೂ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ. ಭಾರತ- ಜಪಾನ್ನ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಇತರೆ ನವ ಉದ್ಯಮಗಳಲ್ಲಿ ಉದ್ಯೋಗ ಸೃಜಿಸುವ ಉದ್ದೇಶದಿಂದ ಈ ಸೇವೆ ಆರಂಭವಾಗುತ್ತಿದೆ ಎಂದು ಜೆಎಎಲ್ ಸ್ಪಷ್ಟಪಡಿಸಿದೆ.ಸದ್ಯ ಟೋಕಿಯೋ- ನವದೆಹಲಿ- ಬೆಂಗಳೂರು ಮೂಲಕ ವಾಯುಯಾನ ಸೇವೆ ಲಭ್ಯವಿದೆ…..