ನವದೆಹಲಿ:
ಬಾಲಾಕೋಟ್ ನಲ್ಲಿ ಭಾರತದ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಕುಖ್ಯಾತ ಉಗ್ರ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮೌಲಾನಾ ಮಸೂದ್ ಅಜರ್ ಬಲಿಯಾಗಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.
ಕೆಲ ಮೂಲಗಳ ಮಾಹಿತಿಯ ಪ್ರಕಾರ, ದಾಳಿ ನಡೆದಾಗ ಅಜರ್ ಮಸೂದ್ ಮತ್ತು ಐಎಸ್ ಐ ನ ಉನ್ನತ ಶ್ರೇಣಿಯ ಅಧಿಕಾರಿ ಕರ್ನಲ್ ಸಲೀಂ ಇಬ್ಬರೂ ಬಾಲಾಕೋಟ್ ಉಗ್ರ ನೆಲೆಯಲ್ಲಿ ಇದ್ದರು ಎನ್ನಲಾಗಿದೆ.
ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ನಡೆಸಿದ ಎರಡು ದಿನಗಳ ನಂತರ ಮಸೂದ್ ಅಜರ್ ಮೂತ್ರ ಪಿಂಡದ ವೈಫಲ್ಯದಿಂದ ರಾವಲ್ಪಿಂಡಿ ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿಕೆ ನೀಡಿದ್ದರು. ಏರ್ ಸ್ಟ್ರೈಕ್ ನಲ್ಲಿ ಮಸೂದ್ ಅಜರ್ ಹತನಾಗಿರುವ ವಿಚಾರವನ್ನು ಮರೆಮಾಚಲು ಪಾಕಿಸ್ಥಾನ ಈ ರೀತಿ ಹೇಳಿಕೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ…….