Breaking News

ಮಂಡ್ಯ ಮಹಾಯುದ್ಧದಲ್ಲಿ ಸುಮಲತಾ ಸುನಾಮಿ..!

ಅಬ್ಬರಿಸಿ ಬೊಬ್ಬಿರಿದ ಜೋಡೆತ್ತುಗಳು....

SHARE......LIKE......COMMENT......

ಮಂಡ್ಯ:

ಅಂಬರೀಷ್ ಅಗಲಿಕೆಯ ನೋವಿನಲ್ಲೇ ರಾಜಕೀಯಕ್ಕೆ ಧುಮುಕಿರುವ ಸುಮಲತಾ, ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನೆನ್ನೆ ಉಮೇದುವಾರಿಕೆ ಸಲ್ಲಿಸಿದ್ರು. ಸ್ಯಾಂಡಲ್​ವುಡ್​ನ ದಿಗ್ಗಜರ ಜೊತೆಗೂಡಿ ಶಕ್ತಿ ಪ್ರದರ್ಶನ ಮಾಡಿ, ಸುಮಲತಾ ಸೌಮ್ಯವಾಗಿಯ ಮಾತನಾಡಿ ಎದುರಾಳಿಯ ಎದೆ ನಡುಗಿಸುವಂತೆ ಮಾಡಿದ್ರು.

ಇದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ಭಟಿಸಿದ್ರು. ನಟ ಯಶ್ ಮಾತನಾಡಿ, ನಾವೇನು ಪಾಕಿಸ್ತಾನದಿಂದ, ಅಂಟಾರ್ಟಿಕಾದಿಂದ ಬಂದಿಲ್ಲ. ಕೆಲವರು ನಾವು ತಪ್ಪು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಾವು ಅದೇ ತಪ್ಪು ಮುಂದುವರೆಸುತ್ತೇವೆ ಅಂತ ಎದುರಾಳಿಗಳಿಗೆ ಟಾಂಗ್ ಕೊಟ್ರು. ಇನ್ನು ದರ್ಶನ್ ಅಭಿಮಾನಿಗಳ ಪ್ರೀತಿ ಕಂಡು, ನಮ್ಮ ಇಡೀ ದೇಹದ ರಕ್ತದಲ್ಲಿ ನಿಮ್ಮ ಪಾದ ತೊಳದರೂ ಕಡಿಮೆಯೇ ಅಂತ ಕೃತಜ್ಞತೆ ಸಲ್ಲಿಸಿದ್ರು. ಯಾರು ಏನೇ ಅಂದ್ರೂ ಬೇಜಾರಾಗಲ್ಲ. ನೋಂದ್ಕೊಳಲ್ಲ. ಅಭಿಮಾನಿಗಳು ಪಂಚೆ ಎತ್ತಿ ಕಟ್ಟಿ ನಿಂತ್ರೆ ಏನಾಗುತ್ತೆ ಅನ್ನೋದು ಫಲಿತಾಂಶದಲ್ಲಿ ಗೊತ್ತಾಗುತ್ತೆ ಅಂದ್ರು……