SHARE......LIKE......COMMENT......
ಅಡುಗೆ:
ಬೇಕಾಗುವ ಪದಾರ್ಥಗಳು
- ತುಪ್ಪ-3 ಚಮಚ
- ಶುಂಠಿ, ಬೆಳ್ಳುಳ್ಳು ಪೇಸ್ಟ್- 1 ಚಮಚ
- ಅರಿಶಿನ- ಅರ್ಧ ಚಮಚ
- ಕುರಿ ಮಾಂಸ- 1 ಕೆಜಿ
- ಉಪ್ಪು- ರುಚಿಗೆ ತಕ್ಕಷ್ಟು
- ಕಾಶ್ಮೀರಿ ಮೆಣಸಿನ ಕಾಯಿ – 10
- ದನಿಯಾ- 1 ಚಮಚ
- ಕಾಳು ಮೆಣಸು- 1 ಚಮಚ
- ಸೋಂಪು- 1 ಚಮಚ
- ಜೀರಿಗೆ- 2 ಚಮಚ
- ಚಕ್ಕೆ- 1
- ಲವಂಗ- 4
- ಮರಾಠಿ ಮೊಗ್ಗು- 1
- ಒಣಗಿದ ಮೆಣಸಿನ ಕಾಯಿ- 6
- ಶುಂಠಿ – ಸ್ವಲ್ಪ
- ಬೆಳ್ಳುಳ್ಳು – 2 ಎಸಳು
- ನಿಂಬೆಹಣ್ಣಿನ ರಸ- 1 ಚಮಚ
- ಮೊಸರು- 1 ಚಮಚ
ಮಾಡುವ ವಿಧಾನ…
- ಮೊದಲು ಕುಕ್ಕರ್’ಗೆ ತುಪ್ಪ ಕಾಯಿಸಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಹಾಕಿ ಹುರಿದುಕೊಳ್ಳಬೇಕು.
- ನಂತರ ತೊಳೆದ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ, ಬೇಯಲು ನೀರು ಹಾಕಿ ಕುಕ್ಕರ್ ಮುಚ್ಚಿ 4-5 ಕೂಗು ಕೂಗಿಸಿಕೊಳ್ಳಬೇಕು.
- ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ, ಕಾಶ್ಮೀರಿ ಮೆಣಸಿನ ಕಾಯಿಯನ್ನು ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು.
- ಇದೇ ಬಾಣಲೆಗೆ, ದನಿಯಾ, ಕಾಳು ಮೆಣಸು, ಸೋಂಪು, ಜೀರಿಗೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ಒಣಗಿದ ಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಮಿಕ್ಸಿ ಜಾರ್’ಗೆ ಹುರಿದಿಟ್ಟುಕೊಂಡಿದ್ದೆಲ್ಲವನ್ನೂ ಹಾಕಿ, ಶುಂಠಿ, ಬೆಳ್ಳುಳ್ಳು, ನಿಂಬೆರಸ ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
- ಕುಕ್ಕರ್ ಮುಚ್ಚಳ ತೆಗೆದು ಬೆಂದ ಮಾಂಸದಿಂದ ನೀರನ್ನು ಬಸಿದು ತೆಗೆದಿಟ್ಟುಕೊಳ್ಳಬೇಕು.
- ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ತುಪ್ಪ, ರುಬ್ಬಿಕೊಂಡ ಮಿಶ್ರಣ, ಮೊಸರು, ಬೆಂದ ಮಾಂಸದಿಂದ ತೆಗೆದ ನೀರು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಮಸಾಲೆ ಗಟ್ಟಿಯಾಗುತ್ತಿದ್ದಂತೆಯೇ ಬಂದ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 2-3 ನಿಮಿಷ ಬೇಯಲು ಬಿಡಬೇಕು. ನಂತರ ಕರಿಬೇವಿನ ಎಲೆಗಳನ್ನು ಹಾಕಿ ಅಲಂಕರಿಸಿದರೆ, ರುಚಿಕರವಾದ ಮಟನ್ ಘೀ ರೋಸ್ಟ್ ಸವಿಯಲು ರೆಡಿ……