Breaking News

ಮನೆ ಕಟ್ಟುವಾಗ ವಾಸ್ತು ನೋಡಿ..!

SHARE......LIKE......COMMENT......

ವಾಸ್ತು ಟಿಪ್ಸ್:

ಮನೆಯನ್ನು ಕಟ್ಟುವಾಗ ಅನೇಕ ಸಣ್ಣ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ ಅಗ್ನಿಮೂಲೆ, ವಾಯು ಮೂಲೆಗಳಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲು ಮನೆ, ಪಡಸಾಲೆ.ದೇವರ ಮನೆ, ಇತ್ಯಾದಿಗಳನ್ನೆಲ್ಲ ಮೀಸಲಿಡಬೇಕೆಂಬ ಸಂಗತಿ ಬೇರೆ. ಆದರೆ ಈ ಎಲ್ಲಾ ವಿಚಾರಗಳ ಹೊರತಾಗಿ ಕೆಲವು ಅನುಸರಿಸಬೇಕಾದ ವಿಚಾರಗಳು ಕೂಡಾ ಮುಖ್ಯವಾಗಿದೆ. ಇದರಿಂದ ಮನೆಯೊಳಗಿನ ಶಾಂತಿ, ಸಮಾಧಾನ, ಸಮೃದ್ಧಿ, ಆರೋಗ್ಯ, ನಗು, ಕೇಕೆ, ಸುಖ, ಸಂತೋಷಗಳೆಲ್ಲ ವೃದ್ಧಿಗೊಳ್ಳಲು ಅವಕಾಶ ಒದಗಿ ಬರುತ್ತದೆ. ಇಲ್ಲದಿದ್ದರೆ ಅನೇಕ ಕಿರಿಕಿರಿಗಳು ಎಲ್ಲಾ ವಿಚಾರಗಳಲ್ಲೂ ಮೂಡಿಬಂದು ಅನೇಕ ಅಶಾಂತಿ, ಅಸಮಾಧಾನಗಳಿಗೆ ದಾರಿ ಮಾಡಿಕೊಡುತ್ತದೆ.

ಮನೆಯಲ್ಲಿ ರಸ್ತೆಯಿಂದ ಮನೆಯೊಳಗಿನ ಕಾಂಪೌಂಡ್‌ ಒಳಗೆ ಕಾಲಿಡಲು, ಇರುವ ಗೇಟ್‌ ಯಾವಾಗಲೂ ಮನೆಯ ಹೆಬ್ಟಾಗಿಲಿಗಿಂತ ಚಿಕ್ಕದಿರಬೇಕು ಹಾಗೂ ಹೆಬ್ಟಾಗಿಲು ಎತ್ತರದಲ್ಲಿರಬೇಕು. ಇತ್ತೀಚೆಗೆ, ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರೊಬ್ಬರು ಇದ್ದ ತಮ್ಮ ಮನೆಯನ್ನು ಹಳೆ ರೀತಿಯಿಂದ ಹೊಸಮಾದರಿಗೆ ನವೀಕರಣಗೊಳಿಸುವ ಸಂದರ್ಭದಲ್ಲಿ ಕಾಪೌಂಡ್‌ ಗೇಟನ್ನು ತುಸು ಎತ್ತರಿಸಿ ನವೀನ ಕುಸುರಿಯಲ್ಲಿ ನಿಯೋಜಿಸಿ ಹೆಬ್ಟಾಗಿಲಿಗಿಂತ ದೊಡ್ಡದಾಗಿರಿ ಸುತಾರೆ.

ಆದರೆ ಕೆಲವೇ ದಿನಗಳಲ್ಲಿ ಚೆನ್ನಾಗಿದ್ದ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಈ ಅಸಮತೋಲನ ಅಳತೆಗಳು ಸರಿಹೋದ ಮೇಲೆ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತು.

ಮನೆಯ ಟೆರೆಸ್‌ ಅಥವಾ ಮಹಡಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಪೂರ್ವದಿಂದ ಪಶ್ಚಿಮಕ್ಕೆ ಮುಖವಿರಿಸಿ ಏರುವಂತಿದ್ದರೆ ಸೂಕ್ತ. ಉತ್ತರದಿಂದ ದಕ್ಷಿಣ ದಿಕ್ಕಿಗೆ ಮುಖವಾಗುವಂತೆ ಇದ್ದರೂ ಸರಿಯೆ. ಈ ಅಂಶವನ್ನು ಪರಿಪಾಲಿಸಿದಲ್ಲಿ ಉತ್ತಮ ಅದೃಷ್ಟವು ಶೀಘ್ರವಾಗಿ ಒದಗಿಬರಲು ಅವಕಾಶವಾಗುತ್ತದೆ. ಮನೆಯ ಸೈಟಿನಲ್ಲಿ ಗುದ್ದಲಿ ಪೂಜೆ ಕೂಡ ಪ್ರಮುಖವಾದದ್ದು. ದಕ್ಷಿಣ ಹಾಗೆಯೇ ಪೂರ್ವ ದಿಕ್ಕುಗಳು ಈ ಸಂದರ್ಭದಲ್ಲಿ ಪ್ರಥಮವಾಗಿ ಅಗೆಯಬಾರದು. ಪೂರ್ವ ದಿಕ್ಕಿನಲ್ಲಿ ಅಗೆಯುವ ವಿಚಾರ ಕೈಗೊಂಡಾಗ ಉತ್ತರ ದಿಕ್ಕಿನಲ್ಲೂ ಅಗೆತ ಪ್ರಾರಂಭಿಸಬೇಕು. ಇದರಿಂದ ಮನೆಯ ಎಲ್ಲಾ ವಿಚಾರಗಳಲ್ಲೂ ತೊಂದರೆ ಇಲ್ಲದೆ ಸುಸೂತ್ರವಾಗಿ ಮುಂದುವರೆಯುತ್ತದೆ.

ದಕ್ಷಿಣ ದಿಕ್ಕಿಗೆ ಪೂರಕವಾಗಿ ಹೊರಗಿನ ವರಾಂಡ ಕಟ್ಟುವ ನಿರ್ಣಯ ನಡೆಸಿದಲ್ಲಿ ಆಗ್ನೇಯ ದಿಕ್ಕಿನಲ್ಲಿ (ಪೂರ್ವ ದಕ್ಷಿ$ಣ ಮೂಲೆಯ ಭಾಗ) ಕೋಣೆ ಇದ್ದು ಉತ್ತರ ದಿಕ್ಕಿಗೆ ಮುಖ ಮಾಡಿದ ಬಾಗಿಲನ್ನು ಕೂಡಿಸಬೇಕು. ಮನೆಯ ಯಜಮಾನನ ಆರೋಗ್ಯ ಲವಲವಿಕೆ ಉತ್ಸಾಹಗಳಿಗೆ ಇದು ಉತ್ತಮ ವಿಚಾರವಾಗುತ್ತದೆ.

ಮನೆಯ ಮುಂಬಾಗಿಲು ವಿಷಯದಲ್ಲಿ ಎಚ್ಚರವಿರಲಿ. ನೇರ ಮುಂಬಾಗಿಲ ಎದುರಲ್ಲಿ ಒಂದು ಕಟ್ಟೆಯನ್ನೋ ಗೋಡೆಯನ್ನೋ ನಿರ್ಮಿಸಕೂಡದು. ಇದರಿಂದ ಮನೆಯ ಒಳಗೆ ಆಗಮಿಸುವ ಉತ್ತಮ ಸ್ಪಂದನಗಳು, ಸೌಭಾಗ್ಯ ಅಂಶಗಳು ಬರುವ ಅದೃಷ್ಟಕ್ಕೆ ತಡೆ ನಿರ್ಮಿಸಿದಂತಾಗಿ ಬಿಡುತ್ತದೆ.

ಹೀಗಾಗಿ ತಾನಾಗಿ ಬರುವ ಒಳ್ಳೆ, ಸೌಭಾಗ್ಯದ ವಿಚಾರಗಳನ್ನು ನಾವಾಗಿ ಗೋಡೆ ಅಥವಾ ಕಟ್ಟೆ ಕಟ್ಟಿ ತಡೆಯಲು ಹೋಗಬೇಡಿ. ಕಟ್ಟೆ ಇರುವುದನ್ನು ಬಯಸಿ, ಕಟ್ಟುವುದಾದಲ್ಲಿ ಮುಂಬಾಗಿಲ ಅಕ್ಕಪಕ್ಕ ಬರುವಂತೆ ಕಟ್ಟಿ. ಮುಂಬಾಗಿಲಿಗೆ ಯಾವರೀತಿ ತಡೆಯೂ ಆಗದಂತೆ ನೋಡಿಕೊಳ್ಳಿ. ಮನೆಯ ಸುರಕ್ಷಿತಗಾಗಿನ ಗೋಡೆಯೂ ಕೂಡ, ಇದ್ದರೂ,
ಕಟ್ಟಲ್ಪಟ್ಟರೂ ಮುಂಬಾಗಿಲ ಉದ್ದ, ಅಡ್ಡ ಅಗಲಗಳಿಗೆ ಯಾವುದೇ ರೀತಿ ತೊಂದರೆ ಆಗದೇ ಇರುವಂತೆ ಇರಲಿ. ಈವಿಚಾರವನ್ನು ಮರೆಯದೇ ಗಮನ ಹರಿಸುವುದು ಸೂಕ್ತ. ಮನೆಯ ಸೊಗಸು ಹಾಗೂ ಭದ್ರತೆಯ ವಿಚಾರಗಳನ್ನು ಯಾವಾಗಲೂ ಮರೆಯಬಾರದು.

– ಅನಂತಶಾಸ್ತ್ರಿ