ಕೊಪ್ಪಳ:
ಮೀಟರ್ ಬಡ್ಡಿಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಿನ್ನೆ(ಗುರುವಾರ) ನಡೆದಿದೆ.ಯುವಕ ರಘುರಾಮ್, ಮಧುಚಂದ್ರ ಎಂಬುವವರಿಂದ 20 ಸಾವಿರ ಸಾಲ ಪಡೆದಿದ್ದ. 2 ವರ್ಷದಲ್ಲಿ 10 ಪರ್ಸೆಂಟ್ ರೀತಿ 1.5 ಲಕ್ಷ ರೂ ಬಡ್ಡಿ ಕಟ್ಟುವಂತೆ ರಘುರಾಮ್ಗೆ ಮಧುಚಂದ್ರ ಕಿರುಕುಳ ನೀಡಿದ್ದ ಎನ್ನಲಾಗಿದೆ. ಕಿರುಕುಳ ತಾಳದೆ ಯುವಕ ಒಂದು ವಾರದಿಂದ ಊರು ಬಿಟ್ಟಿದ್ದ. ನಿನ್ನೆ ಮರಳಿ ಬಂದಾಗ ಮತ್ತೆ ತೊಂದರೆ ಕೊಟ್ಟಿದ್ದಾನೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾದ ಯುವಕ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಧುಚಂದ್ರ ಪರವಾನಗಿ ಇಲ್ಲದೆ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಬಡ್ಡಿ, ಸಾಲ ಕಟ್ಟುತ್ತೇವೆ ಅಂದರೂ ನನ್ನ ಮಗನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರಘುರಾಮ್ ತಂದೆ-ತಾಯಿ ಆಕ್ರೋಶ ವ್ಯಕ್ತಪಡಿಸಿದ್ದು, ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ….