Breaking News

ಮೈತ್ರಿ ಶಾಸಕರ ಬಂಡಾಯ ಮತ್ತೆ ಠುಸ್..!

2 ತಿಂಗಳು ಅಮೆರಿಕ ಪ್ರವಾಸಕ್ಕೆ ತೆರಳಲು ರಮೇಶ್​ಗೆ ಸಲಹೆ.....

SHARE......LIKE......COMMENT......

ಬೆಂಗಳೂರು:

ದೋಸ್ತಿ ಶಾಸಕರ ಬಂಡಾಯ ಮತ್ತೆ ಠುಸ್​ ಆಗಿದೆ. ದೊಡ್ಡ ಗಂಡಾಂತರದಿಂದ ದೋಸ್ತಿ ಸರ್ಕಾರ ಬಚಾವ್​​​ ಆಗಿದೆ. ರಮೇಶ್​ ಜಾರಕಿಹೊಳಿ ಬಂಡಾಯಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್​​​ ಹಾಕಿದ್ದಾರೆ. 2 ತಿಂಗಳು ಅಮೆರಿಕ ಪ್ರವಾಸಕ್ಕೆ ತೆರಳಲು ರಮೇಶ್​ಗೆ ಸಲಹೆ ನೀಡಿದ್ದಾರೆ. ಎಲೆಕ್ಷನ್​​​ ರಿಸಲ್ಟ್​ ಬರೋವರೆಗೂ ಬಿಜೆಪಿ ನಾಯಕರ ಕೈಗೆ ಸಿಗಬೇಡ. ಅಮೆರಿಕಕ್ಕೆ ಹೋಗು..ಮನಸ್ಸು ನಿರಾಳ ಆಗುತ್ತೆ ಎಂದು ಸಿಎಂ ಸಲಹೆ ನೀಡಿದ್ದಾರೆ. ಸಿಎಂ ಸಲಹೆ ಮೇರೆಗೆ ಅಮೆರಿಕಕ್ಕೆ ತೆರಳಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ಎರಡು ತಿಂಗಳ ನಂತರ ಜೆಡಿಎಸ್ ಕೋಟಾದಲ್ಲಿ ರಮೇಶ್ ಜಾರಕಿಹೊಳಿ​ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಶಿಕ್ಷಣ ಖಾತೆ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ……