ಬೆಳಗಾವಿ:
ಮಣಿಪುರದ ಇಂಪಾಲ್ ನಲ್ಲಿ ಗ್ರೈನೆಡ್ ಸ್ಪೋಟಗೊಂಡು ವೀರ ಮರಣವನ್ನಿಪ್ಪಿದ ಗೋಕಾಕ ವೀರಯೋಧ ಉಮೇಶ ಹೆಳವರ ಪಾರ್ಥಿವ ಶರೀರ ವಿಶೇಷ ವಿಮಾನ ಮೂಲಕ ನೆನ್ನೆ ಮುಂಜಾನೆ 8.30ಕ್ಕೆ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
ಈ ವೇಳೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಉಪ ಮುಖ್ಯಮಂತ್ರಿ ಡಾ:ಜಿ.ಪರಮೇಶ್ವರ್ ಯೋಧ ಉಮೇಶ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.ಯೋಧ ವಾಹನದಲ್ಲಿ ಬಿದ್ದ ಗ್ರೈನೆಡ್ ತೆಗೆದು ಹೊರಗೆ ಎಸೆದು 22 ಯೋಧರ ಪ್ರಾಣ ರಕ್ಷಿಸುವ ಮೂಲಕ ಯೋಧ ಉಮೇಶ ಸಾಹಸ ಮೆರೆದಿದ್ದಾನೆ ಎಂದರು. ಯೋಧನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು..
ಹುತಾತ್ಮನಾದ ವೀರ ಯೋಧನನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡಲಾಯ್ತು. ವೀರ ಸುಪುತ್ರನನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು……