ರಷ್ಯಾ:
ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಅಗ್ನಿ ಅವಘಡ ಸಂಭವಿಸಿದ 41 ಮಂದಿ ಸಜೀವ ದಹನವಾಗಿರೋ ಘಟನೆ ರಷ್ಯಾದಲ್ಲಿ ನಡೆದಿದೆ. 78 ಪ್ರಯಾಣಿಕರು ಪ್ರಯಾಣ ಮಾಡ್ತಿದ್ದ ಏರೋಪ್ಲೋಟ್ ಸೂಪರ್ಜೆಟ್ ವಿಮಾನ ಹಾರಾಟದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಕೂಡಲೇ ಎಚ್ಚೆತ್ತುಕೊಂಡ ವಿಮಾನದ ಸಿಬ್ಬಂದಿ ವಿಮಾನವನ್ನು ಮಾಸ್ಕೋದ ಸೆರಿಮಿಟಿವೋ ನಿಲ್ದಾಣದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ರು. ಈ ವೇಳೆ ಲ್ಯಾಂಡಿಂಗ್ ವೇಳೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದ್ದು ವಿಮಾನದದ್ದ 41 ಮಂದಿ ಮೃತಟ್ಟಿದ್ರೆ 37 ಮಂದಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.