Breaking News

ರಮೇಶ ಜಾರಕಿಹೊಳಿ ಪುತ್ರ ಕೆಎಂಎಫ್‌ಗೆ ಅವಿರೋಧ ಆಯ್ಕೆ..!

ಪಕ್ಷ ಬಿಡುವ ಮುನ್ಸೂಚನೆಯಲ್ಲಿ ಮತ್ತೊಂದು ಸ್ಥಾನ....

SHARE......LIKE......COMMENT......

ಬೆಂಗಳೂರು:

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್​ ಪಕ್ಷಕ್ಕೆ ಗುಡ್​ ಹೇಳಲು ಮುಂದಾಗಿರೋ ಹೊತ್ತಲ್ಲೇ ರಮೇಶ್​​ ಜಾರಕಿಹೊಳಿ ಪುತ್ರ ಕೆಎಂಎಫ್​ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಬೆಳಗಾವಿ ಹಾಲು ಒಕ್ಕೂಟಕ್ಕೆ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಮೇಶ್​​ ಪುತ್ರ ಅವಿರೋಧವಾಗಿ ಆಯ್ಕೆಯಾಗೋದ್ರ ಮೂಲಕ ಅಮರ್​ನಾಥ್​​ ಜಾರಕಿಹೊಳಿ ರಾಜಕೀಯಕ್ಕೆ ಧುಮುಕಿದ್ದಾರೆ. ಕೆಎಂಎಫ್​ನ 14 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ, ಉಳಿದ 7 ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದೆ.