Breaking News

ರಾಹುಲ್ ಗಾಂಧಿ ಕಾಪ್ಟರ್​​ನಲ್ಲಿ ಮತ್ತೆ ತಾಂತ್ರಿಕ ದೋಷ..!

ಇಂಜಿನ್​​ಲ್ಲಿ ಪ್ರಾಬ್ಲಂ ಎಂದು ರಾಹುಲ್ ಟ್ವೀಟ್....

SHARE......LIKE......COMMENT......

ನವದೆಹಲಿ:

ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಬಿಹಾರಕ್ಕೆ ಪ್ರಯಾಣ ಬೆಳೆಸಿದ ರಾಹುಲ್ ಗಾಂಧಿ ಅವ್ರ ಕಾಪ್ಟರ್​​ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ಬಿಹಾರ್​ಗೆ ಹೋಗಬೇಕಿದ್ದ ರಾಹುಲ್ ದೆಹಲಿಗೆ ವಾಪಸಾಗಿದ್ದಾರೆ. ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಟ್ವೀಟ್​ ಮಾಡಿ, ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಬಿಹಾರ್​​ ಹಾಗೂ ಮಹಾರಾಷ್ಟ್ರದ ಕಡೆಗಳಲ್ಲಿ ಇಂದು ರಾಹುಲ್ ಚುನಾವಣಾ ಪ್ರಚಾರವಿತ್ತು. ಆದ್ರೆ, ಕಾಪ್ಟರ್​​ ಇಂಜಿನ್​​ಲ್ಲಿ ದೋಷ ಕಂಡು ಬಂದ ಹಿನ್ನೆಲೆ ಇಂದು ಮೂರು ಕಡೆ ನಡೆಯಬೇಕಿದ್ದ ಚುನಾವಣಾ ಪ್ರಚಾರ ತಡವಾಗಿ ನಡೆಯಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ……