ಸಿನಿಮಾ:
ಅಂಬಿ ಪುತ್ರನ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡುತ್ತಿದ್ದಾರೆ.ಹೌದು,ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಕಷ್ಟು ಚಿತ್ರಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ್ದಾರೆ. ಈ ಮೂಲಕ ದರ್ಶನ್ ಗೆ ಅಂಬಿ ಸಾಥ್ ನೀಡಿದ್ದರು. ಈಗ ದರ್ಶನ್ ಅಮರ್ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ನಟ ದೇವರಾಜ್ ಹಾಗೂ ನಿರೂಪ್ ಭಂಡಾರಿ ಸಿಕ್ವೇನ್ಸ್ನ ಹಾಡಿನಲ್ಲಿ ದರ್ಶನ್ ಜತೆ ಅಭಿಷೇಕ್ ಡ್ಯಾನ್ಸ್ ಮಾಡಿದ್ದಾರೆ.
ಇದರ ಜತೆಗೆ ಚಿತ್ರದಲ್ಲಿ ದಾಸ ಖಡಕ್ ಡೈಲಾಗ್ ಕೂಡ ಹೊಡೆದಿದ್ದಾರೆ. ಈ ಹಾಡಿಗೆ ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಂದೇಶ್ ಪ್ರೋಡಕ್ಷನ್ಸ್ ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ನಾಗಶೇಖರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಟ್ಟಾರೆ ದರ್ಶನ್ ಅಪ್ಪಾಜಿ ಮಗನ ಸಿನಿಮಾಕ್ಕೆ ಸಾಥ್ ನೀಡ್ತಾ ಇರೋದು ಅಭಿಮಾನಿಗಳಿಗೆ ಖುಷಿ ತಂದಿದೆ…..