Breaking News

ಲಕ್ಸುರಿ ರೈಡ್‌ಗೆ ಗೋಲ್ಡ್‌ ವಿಂಗ್‌..!

SHARE......LIKE......COMMENT......

ಆಟೋ ವರ್ಲ್ಡ್:

ಯುವಕ-ಯುವತಿಯರ ನಾಡಿಮಿಡಿತ ಅರಿತಿರುವ ಆಟೋಮೊಬೈಲ್‌ ಕಂಪನಿಗಳು, ಈಗ ವರ್ಷದ 365 ದಿನಗಳೂ ಹೊಸ ಹೊಸ ವಿನ್ಯಾಸ, ತಂತ್ರಜ್ಞಾನಗಳ ಅಳವಡಿಕೆಯ ಅನ್ವೇಷಣೆಯಲ್ಲಿ ತೊಡಗಿರುತ್ತವೆ. ಇದಕ್ಕೆಂದೇ ತಜ್ಞರನ್ನು, ನೂರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುತ್ತವೆ. ಇಂಥ ಅನ್ವೇಷಣೆಯ ಫ‌ಲವಾಗಿ ಮಾರುಕಟ್ಟೆಗೆ ಪರಿಚಯಗೊಂಡಿರುವ ದುಬಾರಿ ಬೈಕ್‌ಗಳಲ್ಲಿ “ಹೋಂಡಾ ಗೋಲ್ಡ್‌ ವಿಂಗ್‌’ ಕೂಡ ಒಂದು.

1974ರಲ್ಲೇ ಹೋಂಡಾ ಲಕ್ಸುರಿ ವಿನ್ಯಾಸದಲ್ಲಿ ಈ ಹೆಸರಿನ ಬೈಕ್‌ ತಯಾರಿಸಿತ್ತು. ಆನಂತರದ ದಿನಗಳಲ್ಲಿ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾಗಳ ಜನಪ್ರಿಯ ಬೈಕ್‌ಗಳಲ್ಲಿ ಇದೂ ಒಂದಾಗಿತ್ತು. ಜಪಾನ್‌ನಲ್ಲೂ ಈ ಬೈಕ್‌ನ ಬಗ್ಗೆ ಭಾರೀ ಕ್ರೇಜ್‌ ಸೃಷ್ಟಿಯಾಗಿತ್ತು. ಈಗ ಭಾರತ ಕೂಡ ಇದರಿಂದ ಹೊರತಾಗಿಲ್ಲ.

2018ರ ಸಾಲಿನಲ್ಲಿ ಪರಿಚಯಿಸಲಾಗಿರುವ ಗೋಲ್ಡ್‌ ವಿಂಗ್‌ನಲ್ಲಿ ಎಂಜಿನ್‌ನ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ. 1833 ಸಿಸಿ, 125 ಬಿಎಚ್‌ಪಿ ಮತ್ತು 170ಎನ್‌ಎಂ ಟಾರ್ಕ್‌ ಸಾಮರ್ಥ್ಯದ 6 ಸಿಲಿಂಡರ್‌ ಎಂಜಿನ್‌ ಬಳಸಿಕೊಳ್ಳಲಾಗಿದ್ದು, ಯಾವುದೇ ಪ್ರಕಾರದ ರಸ್ತೆಯಲ್ಲೂ ಸಲೀಸಾಗಿ ಮುನ್ನುಗ್ಗುವ ಶಕ್ತಿ ಹೊಂದಿದೆ. ಹೈಡ್ರೋಲಿಕ್‌ ಕ್ಲಚ್‌ ವ್ಯವಸ್ಥೆಯೊಂದಿಗೆ 7ಸ್ಪೀಡ್‌ ಗೇರ್‌ಬಾಕ್ಸ್‌ ನೀಡಲಾಗಿದೆ.

ಎಕ್ಸ್‌ ಶೋರೂಂ ಬೆಲೆ 28.45 ಲಕ್ಷ ರೂ. ನಿಂದ

* ಕರ್ಬ್ ಭಾರ 364 ಕಿಲೋಗ್ರಾಂ
*ಉದ್ದ 2475 ಮಿ.ಮೀ/905ಮಿ.ಮೀ ಅಗಲ/1340ಮಿ.ಮೀ ಎತ್ತರ
*130ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌
*ವೀಲ್‌ ಅಳತೆ 18 ಇಂಚು
*ಇಂಧನ ಶೇಖರಣಾ ಸಾಮರ್ಥ್ಯ 21.1 ಲೀಟರ್‌