Breaking News

ಲೋಕಸಭೆ ಅಖಾಡಕ್ಕೆ ವೈಎಸ್​ಆರ್​​ ಜಗನ್..

375 ಕೋಟಿ ಆಸ್ತಿ ಘೋಷಿಸಿ ನಾಮಪತ್ರ ಸಲ್ಲಿಕೆ....

SHARE......LIKE......COMMENT......

ದೇಶ-ವಿದೇಶ:

ಲೋಕಸಭೆ ಅಖಾಡಕ್ಕೆ ಧುಮುಕಿರೋ ವೈಎಸ್​ಆರ್​​ ಕಾಂಗ್ರೆಸ್​ ಅಧ್ಯಕ್ಷ ಜಗನ್​​ಮೋಹನ್​​ ರೆಡ್ಡಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. 375 ಕೋಟಿ ಸಂಪತ್ತು ಹೊಂದಿರೋ ಜಗನ್​​ಮೋಹನ್​ ರೆಡ್ಡಿಗೆ ಸ್ವಂತ ವಾಹನವೇ ಇಲ್ವಂತೆ. ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ ಜಗನ್​​​, ತನ್ನ ಬಳಿ 375 ಕೋಟಿ ಸಂಪತ್ತಿದೆ. ಪತ್ನಿ ಭಾರತಿ ಹೆಸರಿನಲ್ಲಿ 124 ಕೋಟಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಕೋಟಿ ಸಂಪತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಜಗನ್​ ಮೇಲೆ ಒಟ್ಟು 31 ಕ್ರಿಮಿನಲ್​​ ಪ್ರಕರಣಗಳಿವೆ. ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆಯೇ 11 ಕೇಸ್​ಗಳಿವೆ. 2014ರಲ್ಲಿ ಜಗನ್​ ತಮ್ಮ ಆಸ್ತಿ 313 ಕೋಟಿ ಎಂದು ಘೋಷಣೆ ಮಾಡಿಕೊಂಡಿದ್ದರು. ಪತ್ನಿ ಬಳಿ 57 ಕೋಟಿ ಆಸ್ತಿ ಇದೆ ಎಂದು ಹೇಳಿಕೊಂಡಿದ್ದರು. ಇದೀಗ ಇಬ್ಬರ ಸಂಪತ್ತು 130 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ……