Breaking News

ನಿರುದ್ಯೋಗಿ ಯುವಕರಿಗೆ ಕಾರು ಭಾಗ್ಯ..?

ಎಲ್ಲ ಮನೆಗಳಿಗೂ ಸ್ಮಾರ್ಟ್‌ ಫೋನ್‌....

SHARE......LIKE......COMMENT......

ಹೈದರಾಬಾದ್‌:

ಆಂಧ್ರ ಪ್ರದೇಶದ ಸರಕಾರ ಹಲವು ಯೋಜನೆಗಳೊಂದಿಗೆ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.ಮುಂಬರುವ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯದ ನಿರುದ್ಯೋಗಿ ಬ್ರಾಹ್ಣಣ ಸಮುದಾಯದ ಯುವಕರಿಗೆ ಸ್ವಿಫ್ಟ್‌ ಡಿಸೈರ್‌ ಕಾರು ಹಂಚಲು ಮುಂದಾಗಿದೆ. ರಾಜ್ಯದ ಪ್ರತಿಯೊಂದು ಮನೆಯಲ್ಲೂ ಸ್ಮಾರ್ಟ್‌ ಫೋನ್‌ ಇರಬೇಕು ಎಂದು ಎಲ್ಲ ಮನೆಗಳಿಗೂ ಸ್ಮಾರ್ಟ್‌ ಫೋನ್‌ ಹಂಚಲು ಮುಂದಾಗಿದೆ.ರಾಜ್ಯದಲ್ಲಿ  ಸಾಮಾನ್ಯ ನಾಗರಿಕನಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಮನೆಗೂ ಆಂಧ್ರಾ ಸರಕಾರ ಸ್ಮಾರ್ಟ್‌ಫೋನ್‌ ನೀಡುವುದಾಗಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದರ ಬಗ್ಗೆ ದಿ ಹಿಂದೂ ವರದಿ ಮಾಡಿತ್ತು.

ಕಾರು ವಿತರಣೆ ಯೋಜನೆಯು ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ನಡೆಯುತ್ತಿದೆ. ಬ್ರಾಹ್ಮಣ ಅಭಿವೃದ್ಧಿ ಸಂಘವು ಗರಿಷ್ಠ 2 ಲಕ್ಷ ರೂ. ಸಬ್ಸಿಡಿ ಒದಗಿಸುತ್ತಿದೆ. ಫಲಾನುಭವಿಗಳು ಶೇ.10ರಷ್ಟು ಮೊತ್ತವನ್ನು ಭರಿಸಬೇಕಿದೆ. ಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದಾದ ಸಾಲವಾಗಿ ಸೊಸೈಟಿ ಭರಿಸುತ್ತಿದೆ. ಮೊದಲ ಹಂತದಲ್ಲಿ 50 ಕಾರುಗಳನ್ನು ಮಂಜೂರು ಮಾಡಿದೆ. ಒಟ್ಟಾರೆ ಈ ಯೋಜನೆಯಿಂದ 1.5 ಲಕ್ಷ ಮಂದಿ ಫಲಾನುಭವಿಗಳಿಗೆ ಕಾರು ಭಾಗ್ಯ ಸಿಗಲಿದೆ ಎನ್ನಲಾಗಿದೆ……