Breaking News

ಲೋಕ ಎಲೆಕ್ಷನ್​​ಗೆ ಮೋದಿ ಡಿಫರೆಂಟ್​​ ಪ್ರಚಾರ..!

‘ಮೈ ಭಿ ಚೌಕಿದಾರ್​ ಹೂ’ ಎಂದು ಬಿಜೆಪಿ ಕ್ಯಾಂಪೇನ್...

SHARE......LIKE......COMMENT......

ಬೆಂಗಳೂರು:

2019ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಮತ್ತೆ ಅಧಿಕಾರ ಗದ್ದುಗೆ ಹಿಡಿಯಲು ಈಗಾಗಲೇ ಪ್ರಚಾರ ತಂತ್ರ ಚುರುಕುಗೊಳಿಸಿದೆ. ನಾನೂ ಚೌಕಿದಾರ್​ ಅನ್ನೋ ಪ್ರಚಾರವನ್ನು ಮೋದಿ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಚೌಕಿದಾರ್​ ಪದವನ್ನು ಬಳಸಿ ವಿಪಕ್ಷಗಳಿಗೆ ಟಾಂಗ್​ ಕೊಟ್ಟಿದ್ದಾರೆ. ನಿಮ್ಮ ಚೌಕಿದಾರ್​​ ದೇಶದ ಸೇವೆಗಾಗಿ ನಿಂತಿದ್ದಾರೆ. ನಾನು ಏಕಾಂಗಿಯಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯೂ ನನ್ನ ಜೆೊತೆ ಇದ್ದಾರೆ.

ಸಮಾಜದಲ್ಲಿರೋ ಭ್ರಷ್ಟಾಚಾರ, ಸಾಮಾಜಿಕ ಪಿಡಗುಗಳ ವಿರುದ್ಧ ಚೌಕಿದಾರ ಹೋರಾಡ್ತಾನೆ. ಪ್ರತಿಯೊಬ್ಬರು ಭಾರತದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮೋದಿ ಟ್ವೀಟ್​ ಮಾಡಿದ್ದಾರೆ ಇದರ ಜೊತೆಗೆ ಮೂರು ನಿಮಿಷಗಳ ವೀಡಿಯೋ ಬಿಟ್ಟು ನಮೋ ಪ್ರಚಾರ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನ ಸೆಳೆಯಲು ಬಿಜೆಪಿ ಮೈ ಬೀ ಚೌಕಿದಾರ್​​​ ಕ್ಯಾಂಪೇನ್ ವಿಡಿಯೋ ಪೋಸ್ಟ್​ ಮಾಡಿದ್ದಾರೆ….