Breaking News

ಮೊಬೈಲ್‌ ಕೆಟ್ಟರೆ ಕಂಪನಿಯೇ ಜವಾಬ್ದಾರಿ..!

ವೈದ್ಯರ ನಾಲ್ಕು ವರ್ಷದ ಹೋರಾಟಕ್ಕೆ ಜಯ .....

SHARE......LIKE......COMMENT......

ಬೆಂಗಳೂರು:

ವಾರಂಟಿ ಅವಧಿಯಲ್ಲಿ ಮೊಬೈಲ್‌ ಕೆಟ್ಟರೆ ತಯಾರಿಸಿದ ಕಂಪನಿ ರಿಪೇರಿ ಮಾಡಿಕೊಡಬೇಕು ಅಥವಾ ಮಾರಾಟ ಮಾಡಿದ ಮಳಿಗೆ ರಿಪೇರಿ ಮಾಡಿಕೊಡಬೇಕು. ಅಲ್ಲದೆ, ರಿಪೇರಿ ಹೆಸರಲ್ಲಿ ಗ್ರಾಹಕರನ್ನು ಅಲೆದಾಡಿಸುವುದು ಗ್ರಾಹಕ ಸೇವೆಯಲ್ಲಿ ಲೋಪ ಎಸಗಿದಂತೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಭಿಪ್ರಾಯಪಟ್ಟಿದೆ.

ವೈದ್ಯರೊಬ್ಬರು ಮೊಬೈಲ್‌ ಕಂಪನಿಯೊಂದರ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ನಡೆಸಿದ ವೇದಿಕೆಯು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ವೈದ್ಯರಿಗೆ ಮೊಬೈಲ್‌ ಫೋನ್‌ನ ಮೂಲ ದರ 13, 500 ಹಾಗೂ ಕಾನೂನು ಹೋರಾಟ ಶುಲ್ಕವಾಗಿ 10 ಸಾವಿರ ರೂ. ನೀಡುವಂತೆ ಕಂಪನಿಗೆ ಆದೇಶಿಸಿದೆ. ಈ ಮೂಲಕ ವೈದ್ಯರ ನಾಲ್ಕು ವರ್ಷದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.

”ವ್ಯಕ್ತಿಯೊಬ್ಬ ಉತ್ಪನ್ನವೊಂದನ್ನು ಖರೀದಿ ಮಾಡುವುದು ಅದರ ಪ್ರಯೋಜನ ಪಡೆಯಲೇ ಹೊರತು ಸಮಸ್ಯೆ ಎದುರಿಸಲು ಅಲ್ಲ. ವಾರಂಟಿ ಅವಧಿಯಲ್ಲಿ ದುರಸ್ತಿ ಮಾಡಿಕೊಡುವುದು ಕಂಪನಿಯ ಹೊಣೆ” ಎಂದು ಗ್ರಾಹಕರ ವೇದಿಕೆಯು ಅಂತಿಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ……