Breaking News

ವಿನಯ್​ ವಿಧೇಯ ರಾಮ ಚಿತ್ರ ಪ್ರದರ್ಶನಕ್ಕೆ ತಡೆ..!

ಪೊಲೀಸರ ಮೇಲೆ ಅಭಿಮಾನಿಗಳು ಆಕ್ರೋಶ...

SHARE......LIKE......COMMENT......

ಚಿಕ್ಕಬಳ್ಳಾಪುರ:

ಚಿರಂಜೀವಿ ಪುತ್ರ ರಾಮ್​​​​​ಚರಣ್​​​​ ಅಭಿನಯದ ವಿನಯ್​ ವಿಧೇಯ ರಾಮ ಚಿತ್ರ ವಿಶ್ವದಾದ್ಯಂತ ಇಂದು ರಿಲೀಸ್ ಆಗಿದೆ ಆದರೆ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರದರ್ಶನಕ್ಕೆ  ದಿಢೀರ್​​ ತಡೆ ಹಾಕಿದ್ರಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ…

ಚಿಕ್ಕಬಳ್ಳಾಪುರ ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆ 30 ನಿಮಿಷಕ್ಕೆ ಶೋ ನಿಗದಿಯಾಗಿತ್ತು. ಆದ್ರೆ ಹೆಚ್ಚುವರಿ ಪ್ರದರ್ಶನಕ್ಕೆ ಅನುಮತಿ ಪಡೆದಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ತಡೆಯೊಡ್ಡಿದ್ದರು. ಮುಂಜಾನೆ 3 ಹಾಗೂ 4 ಗಂಟೆಗೆ ಬಂದು ಕಾತುರದಿಂದ ಪ್ರೇಕ್ಷಕರು ಕಾದಿದ್ದರು. ಆದ್ರೆ ಪೊಲೀಸರು ತಡೆಯೊಡ್ಡಿದ್ದರಿಂದ 150-200 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು ಆಕ್ರೋಶಗೊಂಡರು….