Breaking News

ಬಿಎಸ್​ಎನ್​ಎಲ್​ ನೌಕರರ ಪ್ರತಿಭಟನೆ..!

ಪಿಂಚಣಿ ಪರಿಷ್ಕರಣೆ, 4ಜಿ ತರಂಗಾಂತರಗಳ ನಿರ್ಲಕ್ಷ್ಯ....

SHARE......LIKE......COMMENT......

ತುಮಕೂರು:

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರಿನಲ್ಲಿ ಬಿಎಸ್ಎನ್ಎಲ್ ನೌಕರರು ಬಿಎಸ್ಎನ್ಎಲ್ ಕಚೇರಿ ಮಂದೆ ಪ್ರತಿಭಟನೆ ನಡೆಸಿದರು.ನೌಕರರ ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ, ಬಿಎಸ್ಎನ್ಎಲ್​ಗೆ 4ಜಿ ತರಂಗಾಂತರಗಳನ್ನು ನೀಡುವ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಂಪರ್ಕ ಇಲಾಖೆಯ ರಾಜ್ಯ ಸಚಿವರಾದ ಮನೋರಂಜನ್ ಸಿನ್ಹಾರವರು ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆಗಳನ್ನು ನೀಡಿದರೇ ವಿನಾ ಇಲ್ಲಿಯವರೆಗೂ ಬೇಡಿಕೆಗಳನ್ನು ಈಡೇರಿಸಿಲ್ಲ. ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ, ಪ್ರತಿಭಟನೆ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘದ ಮುಖಂಡರು ಆರೋಪಿಸಿದರು.

ತುಮಕೂರು ಸೇರಿದಂತೆ ರಾಷ್ಟ್ರವ್ಯಾಪಿ ಧರಣಿ ನಡೆಸಲಾಗುವುದು ಹಾಗೂ ನವೆಂಬರ್ 14ರಂದು ದೇಶಾದ್ಯಂತ ರ್ಯಾಲಿ ನಡೆಸಲಾಗುವುದು. ನವೆಂಬರ್ 30ರ ಒಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾನಿರತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು….