Breaking News

ರಾಜ್ಯದಲ್ಲಿ ಗಗನಕ್ಕೇರುತ್ತಿದೆ ತರಕಾರಿ ರೇಟ್​…!

ಗ್ರಾಹಕರ ಜೇಬಿಗೆ ಭಯಂಕರ ಕತ್ತರಿ....

SHARE......LIKE......COMMENT......

ಬೆಂಗಳೂರು..

ಹುಳಿಯಾಗ್ತಿದೆ ಟೊಮ್ಯಾಟೋ..ಮತ್ತಷ್ಟು ಕಹಿಯಾಗ್ತಿದೆ ಹಾಗಲಕಾಯಿ,ಬೆಂದಹೋಗುತ್ತಿದೆ ಬದನೇಕಾಯಿ….ಶಾಕ್ ಕೊಡುತ್ತಿದೆ ಕ್ಯಾರೇಟ್ ರೇಟ್..ಯೆಸ್ ರಾಜ್ಯದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಸತತ ಮಳೆ ಹಾಗೂ ಹವಾಮಾನ ವೈಪರೀತ್ಯದ ಎಫೆಕ್ಟ್​ನಿಂದ ಬೇಡಿಕೆಯಷ್ಟು ತರಕಾರಿ ಮಾರ್ಕೆಟ್​ಗೆ ಬರದೇ ರೇಟ್​ ಹೆಚ್ಚಳವಾಗಿದೆ ..ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊ 110-120 ರೂಪಾಯಿದ್ದು, ಕಳೆದ ತಿಂಗಳು ಕೆಜಿಗೆ 10 ರೂ. ಇದ್ದ ಟೊಮ್ಯಾಟೋ ದಿಢೀರ್ ಏರಿಕೆಯಾಗಿದೆ,ತರಕಾರಿ ಬೆಲೆ ಏರಿದ್ರಿಂದ ವ್ಯಾಪಾರಿಗಳು ಫುಲ್ ಕಂಗಲಾಗಿದ್ದಾರೆ.ಇದರಿಂದ ಗ್ರಾಹಕರು ಫುಲ್ ಟೆನ್ಷನ್​​​​​ ಆಗಿದ್ದಾರೆ……

ಯಾವ ತರಕಾರಿ ಎಷ್ಟು..?
ಫಾರಂ ಬಟಾಣಿ- 180 ರೂ.
ಟೊಮ್ಯಾಟೋ- 120 ರೂ.
ಬೀನ್ಸ್​- 100 ರೂ.
ಹೀರೆಕಾಯಿ- 70 ರೂ
ನಿಂಬೆ ಹಣ್ಣು- 20 ರೂ.
ಮೂಲಂಗಿ- 40 ರೂ.
ಬದನೆಕಾಯಿ- 40 ರೂ
ಎಲೆಕೋಸು- 50 ರೂ.
ಹೂಕೋಸು(1)- 45 ರೂ.
ಕೊತ್ತಂಬರಿ- ಕಟ್ಟಿಗೆ 40 ರೂ.
ಬೆಂಡೆಕಾಯಿ- 50 ರೂ.
ಕ್ಯಾರೇಟ್- 50 ರೂ.
ನುಗ್ಗೆಕಾಯಿ (ಕಟ್ಟು)- 50 ರೂ