ನವದೆಹಲಿ :
ಫೋರ್ಬ್ಸ್ ಬಿಲಿಯನೇರ್ 2019ನೇ ಸಾಲಿನ ಪಟ್ಟಿಯಲ್ಲಿ ಭಾರತದ ದಿಗ್ಗಜ ಉದ್ಯಮಿ ರಿಲಾಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ. 3.5 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ 6 ಸ್ಥಾನ ಜಿಗಿದಿರುವ ಅಂಬಾನಿ ಅವರು 13 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಅಂಬಾನಿ ಅವರು 50 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 19 ನೇ ಸ್ಥಾನ ಪಡೆದಿದ್ದರು.
ಇನ್ನು ವಿಶ್ವದ ನಂ.1 ಶ್ರೀಮಂತ ಅಮೇಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅವರು 131 ಬಿಲಿಯನ್ ಆಸ್ತಿಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಬಿಲ್‌ಗೇಟ್ಸ್ 2ನೇ ಸ್ಥಾನ,ವಾರೆನ್ ಬಫೆಟ್ 3 ನೇ ಸ್ಥಾನ ಪಡೆದುಕೊಂಡಿದ್ದಾರೆ ಹಾಗೂ ಫೇಸ್‌ಬುಕ್‌ನ ಮಾರ್ಕ್ ಜುಕರ್ ಬರ್ಗ್ 3 ಸ್ಥಾನ ಕುಸಿದು 8 ನೇ ಸ್ಥಾನ ಪಡೆದಿದ್ದಾರೆ.
TOP 100 ಶ್ರೀಮಂತರಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು 36 ನೇ ಸ್ಥಾನ ಪಡೆದು 2 ನೇ ಶ್ರೀಮಂತ ಭಾರತೀಯ ಎನಿಸಿಕೊಂಡಿದ್ದಾರೆ.22.6 ಬಿಲಿಯನ್ ಯುಎಸ್ ಡಾಲರ್ ಅವರ ಆಸ್ತಿ ಮೌಲ್ಯವಾಗಿದೆ.
ಎಚ್‌ಸಿಎಸ್ ಸಂಸ್ಥಾಪಕ ಶಿವ ನಾಡರ್ ಅವರು 14.4 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 82 ನೇ ಸ್ಥಾನ ಪಡೆದಿದ್ದಾರೆ. ಅರ್ಸೆಲೊರ್ ಮಿತ್ತಲ್‌ನ ಲಕ್ಷ್ಮೀ ಮಿತ್ತಲ್ ಅವರು 14.1 ಬಿಲಿಯನ್ ಆಸ್ತಿಯೊಂದಿಗೆ 91 ನೇ ಸ್ಥಾನ ಪಡೆದಿದ್ದಾರೆ……