ಸ್ಪೈಸಿ ಬೆಂಡೆ ಮಸಾಲೆಗೆ ಬೇಕಾಗಿರುವ ಸಾಮಾಗ್ರಿಗಳು :
*ಚಿಕ್ಕ ಬೆಂಡೆಕಾಯಿ – 1/4 ಕೆ.ಜಿ.
*ಟೊಮ್ಯಾಟೋ – 1,
*ಜಜ್ಜಿದ ಬೆಳ್ಳುಳ್ಳಿ – 2 ಸೊಳೆಗಳು,
*ಕೊತ್ತಂಬರಿ ಕಾಳಿನ ಹುಡಿ – 1 ಟೀ ಚಮಚ,
*ಜೀರಿಗೆ ಕಾಳಿನ ಹುಡಿ – 1/4 ಟೀ ಚಮಚ,
*ಗರಂ ಮಸಾಲೆ ಹುಡಿ – 1/2 ಟೀ ಚಮಚ,
*ಸಂಸ್ಕರಿಸಿದ ಎಣ್ಣೆ – 1 ಟೇಬಲ್ ಚಮಚ, ಉಪ್ಪು
ಸ್ಪೈಸಿ ಬೆಂಡೆ ಮಸಾಲೆ ತಯಾರಿಸುವ ಸುಲಭ ವಿಧಾನ:
*ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು 2 ಇಂಚು ಗಾತ್ರಕ್ಕೆ ಕತ್ತರಿಸಿಕೊಳ್ಳಿ.
* ಅರ್ಧ ಟೀಸ್ಪೂನ್ ಎಣ್ಣೆಯಲ್ಲಿ ಬೆಂಡೆಕಾಯಿಯನ್ನು ಫ್ರೈ ಮಾಡಿಕೊಳ್ಳಿ. ತುಂಬಾ ಫ್ರೈ ಮಾಡಬೇಡಿ ಯಾಕೆಂದರೆ ಹೀಗೆ ಮಾಡಿದರೆ ಅದು ತುಂಬಾ ಗರಿಗರಿಯಾಗುತ್ತದೆ.
* ಟೊಮ್ಯಾಟೋವನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ.
* ಒಂದು ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ ಸಂಸ್ಕರಿಸಿದ ಎಣ್ಣೆಯನ್ನು ಹಾಕಿ, ಜಜ್ಜಿದ ಬೆಳ್ಳುಳ್ಳಿಯಿಂದ ಒಗ್ಗರಣೆ ಮಾಡಿಕೊಂಡು ಅದರ ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಫ್ರೈ ಮಾಡಿ.
*ಇದೀಗ ಕತ್ತರಿಸಿಕೊಂಡಿರುವ ಟೋಮ್ಯಾಟೋ ತುಂಡುಗಳನ್ನು ಹಾಕಿ ಉಪ್ಪನ್ನು ಸೇರಿಸಿ.
*ಇದನ್ನು ಬೆಂಡಿಕಾಯಿಯೊಂದಿಗೆ ಮಿಶ್ರಣಮಾಡಿ.
*ಇನ್ನು ಹದ ಉರಿಯಲ್ಲಿ ಪಾಕಗೊಳ್ಳುವ ತನಕ ಚೆನ್ನಾಗಿ ಅಲ್ಲಾಡಿಸುತ್ತಾ ಇರಿ.ನಂತರ ಸರ್ವ್ ಮಾಡಿ……