ನವದೆಹಲಿ:
ಇದೇ ಜೂನ್ 21ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಗದ ವಿವಿಧ ಆಸನಗಳ ಬಗ್ಗೆ ಅನಿಮೇಟೆಡ್ ವೀಡಿಯೋ ಮೂಲಕ ತಿಳಿಸಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಶಲಭಾಸನದ ವೀಡಿಯೋ ಟ್ವೀಟ್ ಮಾಡಿದ್ದಾರೆ.
ಶಲಭಾಸನ ಮಾಡುವುದರಿಂದ ಬೆನ್ನು ಮೂಳೆ ಹುರುಪುಗೊಳ್ಳುವುದಲ್ಲದೆ, ಸೊಂಟದ ನೋವು ನಿವಾರಣೆ ಆಗುತ್ತದೆ. ಎದೆಯ ಭಾಗ ಹಿಗ್ಗಲ್ಪಟ್ಟು ಉಸಿರಾಟ ಕ್ರಿಯೆ ಸುಲಭವಾಗುತ್ತದೆ. ಜೀರ್ಣ ಶಕ್ತಿ ಹೆಚ್ಚುತ್ತದೆ. ಈ ಆಸನ ಮಾಡುವುದರಿಂದ ತೊಡೆಯ ಮತ್ತು ಹಿಂಭಾಗಕ್ಕೆ ಉತ್ತಮ ಆಕಾರ ಬರುವುದಲ್ಲದೆ, ನಿಯಮಿತವಾಗಿ ಅಭ್ಯಾಸ ಮಾಡಿದಲ್ಲಿ ದೇಹದ ಕೊಬ್ಬು ಕರಗಿ, ತುಕ ಕಡಿಮೆ ಮಾಡಿಕೊಳ್ಳಲು ಸಹಾಯಕ……