Breaking News

80 ಅಡಿ ಕೆಂಪೇಗೌಡ ಪ್ರತಿಮೆ..!

ಕೆಐಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಾಣ....

SHARE......LIKE......COMMENT......

ಬೆಂಗಳೂರು:

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 80 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿದೆ. ಕೆಐಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಅಶ್ವಥ್​​ನಾರಾಯಣ್​​ ತಿಳಿಸಿದ್ದಾರೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ನಂತರ ಮಾತ್ನಾಡಿದ ಡಿಸಿಎಂ, 23 ಎಕರೆಯಲ್ಲಿ ಥೀಮ್​ ಪಾರ್ಕ್​​ ನಿರ್ಮಾಣ, ಬೆಂಗಳೂರು ಸುತ್ತಮುತ್ತ ಕೆಂಪೇಗೌಡ ಅಭಿವೃದ್ಧಿ ಪಡಿಸಿದ್ದ 46 ಸ್ಥಳಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು. ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದ್ದು, ಎಲ್ಲವೂ ಫೈನಲ್​ ಆದ ನಂತರ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ರು. ಅಲ್ಲದೇ ಫಿಲ್ಮ್​​ ಸಿಟಿಯನ್ನು ರಾಮನಗರದ ಬದಲು ಬೆಂಗಳೂರಿನಲ್ಲೇ ನಿರ್ಮಿಸೋ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಅಶ್ವಥ್​​ನಾರಾಯಣ್​​ ಹೇಳಿದ್ದಾರೆ……