ತುಮಕೂರು:
ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಆರೋಗ್ಯ ಏರುಪೇರು ಉಂಟಾಗಿದ್ದರಿಂದ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಯಾವ್ದೆ ರೀತಿಯಲ್ಲೂ ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ. ರವೀಂದ್ರ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ಪಡೆದು ಮಾತನಾಡಿದ ಅವ್ರು, ಶ್ರೀಗಳ ಶ್ವಾಸಕೋಶದಲ್ಲಿ ತುಂಬಿಕೊಳ್ಳುತ್ತಿರುವ ನೀರನ್ನು ಎರಡು ದಿನಕ್ಕೊಮ್ಮೆ ತೆಗೆಯಲಾಗುತ್ತಿದೆ. ಉಸಿರಾಟದ ತೊಂದರೆಯಾದಾಗ ನೀರು ತೆಗೆಯಲಾಗುವುದು. ಕನಿಷ್ಟ 200ರಿಂದ 300 ಎಂ ಎಲ್ ನೀರು ಹೊರತೆಗೆಯಲಾಗುತ್ತಿದೆ. ಸ್ವಾಮೀಜಿ ಅವರ ಪಲ್ಸ್ ರೇಟ್ ಸಹಜ ಸ್ಥಿತಿಯಲ್ಲಿದ್ದು ಆತಂಕ ದೂರವಾಗಿದೆ ಎಂದರು…
ಸಿದ್ದಗಂಗಾಶ್ರೀಗಳ ಆರೋಗ್ಯ ವಿಚಾರವಾಗಿ ವದಂತಿ ಹಬ್ಬಿದ ಹಿನ್ನೆಲೆ ,ಸಿದ್ದಗಂಗಾ ಮಠದಲ್ಲಿ ಕಿರಿಯ ಶ್ರೀಗಳ ಸ್ಪಷ್ಟನೆ ನೀಡಿದ್ದಾರೆ, ಯಾರೂ ಊಹಾ ಪೋಹಗಳಿಗೆ ಕಿವಿಗೊಡಬೇಡಿ ಶ್ರೀಗಳು ಆರೋಗ್ಯವಾಗಿದ್ದಾರೆ, ಚಿಕಿತ್ಸೆ ಮುಂದುವರೆದಿದೆ ಆಘಾತವಾಗುವಂತಹ ಯಾವುದೇ ಸನ್ನಿವೇಶ ನಡೆದಿಲ್ಲ ಆಪರೇಶನ್ ಆಗಿರುವುದರಿಂದ ರಿಕವರಿ ಆಗಲು ಸ್ವಲ್ಪ ಸಮಯ ಬೇಕು, ಶ್ರೀಗಳ ವಯೋಧರ್ಮದಿಂದ ರಿಕವರಿಗೆ ಹೆಚ್ಚಿನ ಸಮಯ ಅಗತ್ಯ ಎಂದು ಸ್ಪಷ್ಟನೆ ನೀಡಿದರು…..