ಬೆಂಗಳೂರು:
ರಾಜ್ಯದಲ್ಲಿ ಜೂನ್ 11ರ ಸಂಜೆ 5 ಗಂಟೆಯಿಂದ ಜೂನ್ 12ರ ಸಂಜೆ 5 ಗಂಟೆವರೆಗೆ 271 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ, ಏಳು ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ, ಇದುವರೆಗೂ 79 ಮಂದಿಯ ಸಾವಾಗಿದೆ. ಬಳ್ಳಾರಿಯಲ್ಲಿ 97, ಬೆಂಗಳೂರು ನಗರ 36, ಉಡುಪಿ 22, ಧಾರವಾಡ 19, ದಕ್ಷಿಣ ಕನ್ನಡ 17, ಬೀದರ್ 10, ಹಾಸನ 09, ಮೈಸೂರು 09, ತುಮಕೂರು 07, ಶಿವಮೊಗ್ಗ 06, ರಾಯಚೂರು 04, ಉತ್ತರ ಕನ್ನಡ 04, ಚಿತ್ರದುರ್ಗ 03, ರಾಮನಗರ 03, ಮಂಡ್ಯ 02, ಬೆಳಗಾವಿ 01 ಮತ್ತು ವಿಜಯಪುರ ಮತ್ತು ಕೋಲಾರದಲ್ಲಿ ತಲಾ ಒಂದೊಂದು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.ಕರ್ನಾಟಕದಲ್ಲಿ ಇಂದು ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ, ಕೊರೋನಾಗೆ ಓಟ್ಟು 59 ಜನರ ಸಾವಾಗಿದೆ