ಬೆಂಗಳೂರು:
ಸ್ಪೀಕರ್ ಬಾಕ್ಸ್‌ನ ಒಳಗೆ ಬಹಳ ಚಾಕಚಕ್ಯತೆಯಿಂದ ಚಿನ್ನದ ಬಿಸ್ಕೆಟ್‌ಗಳನ್ನು ಕದ್ದು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 3.4 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಕೆಂಪೇಗೌಡ ನಿಲ್ದಾಣಕ್ಕೆ ಸಿಂಗಾಪುರದಿಂದ ಬಂದಿಳಿದಿದ ಪ್ರಯಾಣಿಕ ಮಹಿಳೆ, ಸಿಂಗಾಪುರದ ನಿವಾಸಿ ನೂರುಲೇನ್ ಎಂಬಾಕೆಯಿಂದ 100 ಗ್ರಾಂ ತೂಕದ 92 ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಸ್ಕ್ಯಾನಿಂಗ್ ಯಂತ್ರದಲ್ಲಿ ಒಂದು ಸೂಟ್‌ಕೇಸ್ ಬಗ್ಗೆ ಅನುಮಾನ ಬಂದಿತ್ತು. ಆ ಸೂಟ್‌ಕೇಸನ್ನು ಎರಡನೇ ಹಂತದ ಸ್ಕ್ಯಾನಿಂಗ್‌ಗೆ ಒಳಪಡಿಸುವ ಅಗತ್ಯವಿದೆ ಎನ್ನುವ ಸೂಚನೆ ನೀಡುವ ಸ್ಟಿಕ್ಕರನ್ನು ಆ ಸೂಟ್‌ಕೇಸ್ ಮೇಲೆ ಸಿಬ್ಬಂದಿ ಲಗತ್ತಿಸಿದ್ದರು.
ಆ ನಂತರ ಆ ಸೂಟ್‌ಕೇಸನ್ನು ಮತ್ತೊಂದು ಸುತ್ತಿನ ಸ್ಕ್ಯಾನಿಂಗ್‌ಗಾಗಿ ಪಕ್ಕದಲ್ಲಿ ತೆಗೆದಿಡಲಾಯಿತು. ಅಷ್ಟು ಹೊತ್ತಿಗೆ ಸೂಟ್‌ಕೇಸ್‌ನ ಮಾಲೀಕರು ಅಲ್ಲಿರಲಿಲ್ಲ. ಕೆಲ ಹೊತ್ತು ಕಾದ ಕಸ್ಟಮ್ಸ್ ಅಧಿಕಾರಿಗಳು, ವಿಮಾನದ ಸಿಬ್ಬಂದಿಯಿಂದ ಸೂಟ್‌ಕೇಸ್‌ನ ಮಾಲೀಕರ ಬಗ್ಗೆ ವಿವರ ಕೇಳಿದರು.
ಸೂಟ್‌ಕೇಸ್‌ಗೆ ಲಗತ್ತಿಸಲಾಗಿದ್ದ ಬ್ಯಾಗೇಜ್‌ನ ಮೇಲಿದ್ದ ನಂಬರಿನಿಂದ ಅದು ಸಿಂಗಾಪುರದ ನಿವಾಸಿ ನೂರುಲೇನ್ ಎನ್ನುವವರಿಗೆ ಸೇರಿದ್ದು ಎನ್ನುವುದು ಗೊತ್ತಾಗಿದೆ. ಎರಡನೇ ಸುತ್ತಿನ ಸ್ಕ್ಯಾನಿಂಗ್ ಬಳಿಕ ಸಿಬ್ಬಂದಿ ಸೂಟ್‌ಕೇಸ್ ತೆರವುಗೊಳಿಸಿ ಪರಿಶೀಲನೆ ನಡೆಸಿದಾಗ ಎರಡು ಸ್ಪೀಕರ್ ಬಾಕ್ಸ್‌ಗಳ ಒಳಗೆ ಚಿನ್ನದ ಬಿಸ್ಕೆಟ್‌ಗಳನ್ನು ಇಟ್ಟು ಅದಕ್ಕೆ ಕಪ್ಪು ಟೇಪ್‌ಗಳನ್ನು ಅಳವಡಿಸಿದ್ದು ಗೊತ್ತಾಗಿದೆ…….