ಬೆಂಗಳೂರು:
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಗುರಿಯಾಗಿರುವಾಗಲೇ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಲೀಟರ್ಗೆ 2 ರಿಂದ 3 ರೂಪಾಯಿ ದರ ಏರಿಕೆಯಾಗೋ ಸಾಧ್ಯತೆ ಇದೆ. ದರ ಹೆಚ್ಚಳಕ್ಕೆ ಕರ್ನಾಟಕ ಹಾಲು ಮಹಾ ಮಂಡಲ ಮುಂದಾಗಿದ್ದು, ಜನವರಿ 17ರ ಕೆಎಂಎಫ್ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಭೆಗೂ ಮುನ್ನ ಸಿಎಂ ಬಿಎಸ್ವೈ ಜತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಚರ್ಚಿಸಲಿದ್ದಾರೆ. ಇನ್ನು, ದೊಡ್ಲ, ಜೆರ್ಸಿ, ಹೆರಿಟೇಜ್, ತಿರುಮಲ ಹಾಗೂ ಆರೋಗ್ಯ ಹಾಲಿನ ದರ ಹೆಚ್ಚಳವಾಗೋ ಸಾಧ್ಯತೆ ಇದೆ……