ವಿಜಯವಾಡ:
ಹೆಚ್ಚು ಮಕ್ಕಳನ್ನು ಹೊಂದಿ, ರಾಜ್ಯವನ್ನು ಯಂಗ್ ಆಗಿರಿಸಿ ಎಂದು ಆಂಧ್ರ ಪ್ರದೇಶದ ದಂಪತಿಗೆ , ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ದಂಪತಿಗೆ ಕರೆ ನೀಡಿದ್ದಾರೆ.
ಇದಲ್ಲದೇ ಅವರ ಸರಕಾರ, ಮೂವರು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ರದ್ದುಪಡಿಸಿದೆ…ಕಳೆದ 10 ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆ ಶೇಕಡ 1.6ರಷ್ಟು ಕುಸಿತವಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 50ರಷ್ಟು ಭಾಗ 25 ವರ್ಷದೊಳಗಿನ ಯುವಕ/ಯುವತಿಯರು ಇದ್ದಾರೆ. ಯುವ ಜನರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮೂಲಕ ರಾಜ್ಯವನ್ನು ಯಂಗ್ ಆಗಿರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಬ್ಬರಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದ ಬಯಸುವ ದಂಪತಿಗೆ ಸರಕಾರದ ವತಿಯಿಂದ ಪ್ರೋತ್ಸಾಹ ಯೋಜನೆಯ ಲಾಭಗಳು ದೊರೆಯಲಿವೆ, ಎಂದಿದ್ದಾರೆ…
2011ರ ಜನಗಣತಿ ಅನುಸಾರ, ಅವಿಭಜಿತ ಆಂಧ್ರ ಪ್ರದೇಶ 8.46 ಕೋಟಿ ಜನಸಂಖ್ಯೆಯೊಂದಿಗೆ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯಗಳ ಸಾಲಿನಲ್ಲಿ 10ನೇ ಸ್ಥಾನದಲ್ಲಿತ್ತು.ಬಹುತೇಕ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರೆ, ಆಂಧ್ರಪ್ರದೇಶ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ……
https://www.youtube.com/watch?v=bhfM9ry50tc