ಆಟೋ ವರ್ಲ್ಡ್:
ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 455 ಕಿ.ಮೀ. ಸಂಚರಿಸಲಿದೆ ‘ನಿರೋ ಇವಿ’ ಇಲೆಕ್ಟ್ರಾನಿಕ್ ವಾಹನ, ಎಂದು ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೂಖ್ಯುನ್ ಶಿಮ್ ಹೇಳಿದ್ದಾರೆ.
‘ಭವಿಷ್ಯದ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ’ ಒಡಂಬಡಿಕೆಗೆ ಕಿಯಾ ಮೋಟರ್ಸ್ ಆಂಧ್ರಪ್ರದೇಶ ಸರ್ಕಾರದೊಂದಿಗೆ ಸಹಿ ಹಾಕಿದೆ. ನಿರೋ ಹೈಬ್ರಿಡ್ ಮತ್ತು ನಿರೋ ಪ್ಲಗ್- ಇನ್ ಹೈಬ್ರಿಡ್ನ ಇಲೆಕ್ಟ್ರಿಕ್ ವಾಹನಗಳು ಜಗತ್ತಿನಾದ್ಯಂತ ಅತ್ಯಧಿಕ ಪ್ರಮಾಣದಲ್ಲಿ ಮಾರಾಟ ಆಗುತ್ತಿವೆ.ಭವಿಷ್ಯದ ಸಾರಿಗೆ ವ್ಯವಸ್ಥೆಯಲ್ಲಿ ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಸಿ ಪ್ರಯಾಣಿಕರ ಜೀವನಶೈಲಿ ಸುಧಾರಣೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ಎಲೆಕ್ಟ್ರಿಕ್ ಚಾರ್ಜ್ ಜೊತೆಗೆ ಪೆಟ್ರೋಲ್ ಸೌಲಭ್ಯ ಸಹ ಹೊಂದಿವೆ ಎಂದು ವಿವರಿಸಿದರು.
ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ‘ಎಲೆಕ್ಟ್ರಿಕ್ ವಾಹನ ತಯಾರಿಕ ಕಂಪನಿಗಳಿಗೆ ಅಗತ್ಯ ಸೌಕರ್ಯ ಒದಗಿಸಿ, ಎಲೆಕ್ಟ್ರಿಕ್ ವಾಹನಗಳ ಸಂಚಾರ ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುವುದು.ಹೊಸ ತಲೆಮಾರಿನ ಸಾರಿಗೆ ಸೇವೆಯನ್ನು ಸಾರ್ಜನಿಕರಿಗೆ ಒದಗಿಸಲಾಗುವುದು. ಇಂತಹ ವಾಹನಗಳ ಓಡಾಟ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅನುಕೂಲಕರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ……