ಪಣಜಿ:
ಇಂಡೋನೇಷ್ಯಾದಲ್ಲಿನ ಸುನಾಮಿ ಪ್ರಭಾವದಿಂದ ಗೋವಾದ ಸಮುದ್ರ ಮಟ್ಟದಲ್ಲಿ ಏರಿಕೆ ಆಗಿದ್ದರಿಂದ ಬೀಚ್ಗಳಲ್ಲಿ ನಿರ್ಮಿಸಲಾಗಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಹಾನಿಯಾಗಿದ್ದು, ಬೀಚ್ಗೆ ತೆರಳಿದ್ದ ಪ್ರವಾಸಿಗರು ವಾಪಸ್ ಆಗುತ್ತಿದ್ದಾರೆ. ಹೊಸ ವರ್ಷದ ವೇಳೆ ಬೀಚ್‌ನಲ್ಲಿ ಮದ್ಯದ ಅಮಲಿನಲ್ಲಿ ವಿಹರಿಸಲೆಂದೇ ಗೋವಾ ಪ್ರಯಾಣ ಮಾಡುವವರಿಗೆ ಈ ವರ್ಷ ಅವರ ಸಂತೋಷಕ್ಕೆ ಇಂಡೋನೇಷ್ಯಾದ ಸುನಾಮಿ ಹಾಗೂ ಇಲ್ಲಿನ ಪ್ರವಾಸೋದ್ಯಮ ಇಲಾಖೆ ತಡೆಯೊಡ್ಡಲಿದೆ.
ಮತ್ತೊಂದು ಕಡೆ ಹೊಸ ವರ್ಷ ಸಂಭ್ರಮಾಚರಣೆಗೆ ಆಗಮಿಸುವ ಪ್ರವಾಸಿಗರು ನ್ಯೂ ಇಯರ್ ಆಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇಲ್ಲಿನ ಸರ್ಕಾರ ಮುಂದಾಗಿದೆ.ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.ಇದರ ಜೊತೆಗೆ ಹೊಸ ವರ್ಷ ಆಚರಣೆಗೆ ಗೋವಾಕ್ಕೆ ಬರುವ ಪ್ರವಾಸಿಗರಿಗೆ ಸಾರ್ವಜನಿಕ ಸ್ಥಗಳಲ್ಲಿ ಮದ್ಯಪಾನ ಮಾಡದಂತೆ ಪ್ರವಾಸೋದ್ಯಮ ಇಲಾಖೆ ಆದೇಶಿಸಿದೆ……