ಸಿನಿಮಾ:
ಬಿಗ್‌ಬಾಸ್.. ಬಿಗ್‌ಬಾಸ್.. ಎಲ್ಲೆಲ್ಲೂ ಬಿಗ್‌ಬಾಸ್ ಕ್ರೇಜ್ ,ಈ ಬಾರಿಯ ಬಿಗ್‌ಬಾಸ್ ಡಬಲ್ ಧಮಾಕಾ.. ಬಿಗ್‌ಬಾಸ್ 9 ಜೊತೆಗೆ OTT ಸೀಸನ್ 1 ಶುರುವಾಗುವತ್ತೆ,ಬಿಗ್‌ಬಾಸ್ ಸೀಸನ್ 9 ಯಾವಾಗ ಶುರುವಾಗುತ್ತೆ ಅಂತ ಗೊತ್ತಿಲ್ಲ.. ಆದ್ರೆ ಓಟಿಟಿಯಲ್ಲಿ ಬಿಗ್‌ಬಾಸ್ ಸೀಸನ್ 1 ಗೆ ಮುಹೂರ್ತ ಫಿಕ್ಸ್ ಆಗಿದೆ.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಓಟಿಟಿಯಲ್ಲಿ ಬಿಗ್‌ಬಾಸ್ ಪ್ರಾಂಭವಾಗ್ತಿರೋದು ವಿಶೇಷ. ಇದಕ್ಕಾಗಿ ಭರ್ಜರಿ ತಯಾರಿ ನಡ್ತಿದೆ.
ಓಟಿಟಿ ಬಿಗ್‌ಬಾಸ್ ಸೀಸನ್ 1ರ ಪ್ರೋಮೋ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಶುರುಮಾಡಿದೆ ಬೆಳ್ಳಂ ಇದರಲ್ಲಿ ಕಿಚ್ಚ ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ ಓಟಿಟಿಯಲ್ಲಿ ಬಿಗ್‌ಬಾಸ್ ಆಗಸ್ಟ್ 6ರಂದು ಸಂಜೆ 7 ಗಂಟೆಯಿಂದ ಶುರುವಾಗುತ್ತೆ. 24 ಗಂಟೆಗಳ ಕಾಲ ಓಟಿಟಿಯಲ್ಲಿ ನೀವು ಬಿಗ್ಬಾಸ್ನ ನೋಡಬಹುದು. ಆದ್ರೆ ಓಟಿಟಿ ಬಿಗ್‌ಬಾಸ್ ಸೀಸನ್ಗೆ ಯಾವೆಲ್ಲಾ ಸ್ಟಾರ್ಸ್ ಹೋಗ್ತಾರೆ..? ಕಿರುತೆರೆ ಸ್ಟಾರ್ಸ್ಗೆ ಮಾತ್ರ ಅವಕಾಶ ನಾ..? ಅಥವಾ ಇವರ ಜೊತೆ ಬೆಳ್ಳಿತೆರೆಯ ಕಲಾವಿದರು ಎಂಟ್ರಿ ಕೊಡ್ತಾರಾ..? ಅಂತ ಕಾದು ನೋಡಬೇಕಾಗಿದೆ….