Breaking News

10ನೇ ತರಗತಿಯ ಪರೀಕ್ಷೆ ಏ.20ಕ್ಕೆ ಮುಂದೂಡಿಕೆ..!

ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ....

SHARE......LIKE......COMMENT......

ಬೆಂಗಳೂರು:

ಕೋವಿಡ್-19 ವೈರಸ್ ಸೋಂಕು ತಡೆಗಟ್ಟುವಿಕೆಯ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 10ನೇ ತರಗತಿಯ ಪರೀಕ್ಷೆಗಳನ್ನು ಮಾ.31ರವರೆಗೆ ಮುಂದೂಡಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಲೇ ಇರುವುದರಿಂದ ಹಾಗೂ ಏ.14ರವರೆಗೆ ಇಡೀ ದೇಶವೇ ಲಾಕ್ ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಏ.20ರವರೆಗೆ ಪರೀಕ್ಷೆ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ……