ಸಿನಿಮಾ,ಬೆಂಗಳೂರು:
ಶಿವಣ್ಣ ನಿವಾಸದ ಮೇಲೆ ಐಟಿ ದಾಳಿ ಪ್ರಕರಣ.. 2ನೇ ದಿನವೂ ಮುಂದುವರಿದ ಐಟಿ ಬೇಟೆ,ಯೆಸ್ ನೆನ್ನೆ ರಾತ್ರಿ ಶಿವಣ್ಣ ಮನೆಯಲ್ಲೇ ಮೂವರು ಅಧಿಕಾರಿಗಳು ತಂಗಿದ್ದರು ,ಸದ್ಯ ಇಂದು ಬೆಳಿಗ್ಗೆ 5 ಜನರ ಐಟಿ ಅಧಿಕಾರಿಗಳ ತಂಡ ಶಿವಣ್ಣನ ಮನೆಯಲ್ಲಿ ಮತ್ತೆ ಪರಿಶೀಲನೆ ಮುಂದುವರಿಸಿದ್ದಾರೆ,ಇವತ್ತು ಸಂಜೆವರೆಗೂ ಪರಿಶೀಲನೆ ನಡೆಯುವ ಸಾದ್ಯತೆಯಿದೆ ….
ಇಂದು ಕೂಡ ಐಟಿ ಅಧಿಕಾರಿಗಳ ಪರಿಶೀಲನೆ ಜೋರಾಗಿದೆ..ಶಿವರಾಜ್ ಕುಮಾರ್ ನಡೆಸುತ್ತಿರುವ ಪ್ರೊಡಕ್ಷನ್ ಹೌಸ್ ಕುರಿತು ಮಾಹಿತಿ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ..ಶ್ರೀಮುತ್ತು ಕ್ರಿಯೇಷನ್ಸ್ ಅನ್ನೋ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ತೆಗೆದಿದ್ದರು ಹಾಗೂ ಮಗಳು ನಿವೇದಿತಾ ಹೆಸರಿನಲ್ಲಿ ನಡೆಸುತ್ತಿದ್ದ ಪ್ರೊಡಕ್ಷನ್ ಹೌಸ್ ಜೊತೆಗೆ ವೆಬ್ ಸೀರೀಸ್ ಗಳನ್ನ ಕೂಡ ಮಾಡಲಾಗುತ್ತಿತ್ತು ,ಹೀಗಾಗಿ ಕೋಟ್ಯಾಂತರ ರೂಪಾಯಿ ಪ್ರೊಡಕ್ಷನ ಹೌಸ್ನಲ್ಲಿ ಹೂಡಿಕೆ ಮಾಡಲಾಗಿದೆ ,ಈ ಕುರಿತು ಮಹತ್ವದ ದಾಖಲೆ ಪಡೆಯುತ್ತಿರುವ ಐಟಿ ಅಧಿಕಾರಿಗಳು…
ನೆನ್ನೆಯಿಂದ ಐಟಿ ಅಧಿಕಾರಿಗಳು ಶಿವಣ್ಣ ಮನೆಯಲ್ಲಿ ಬೀಡು ಬಿಟ್ಟ ಕಾರಣ ಶಿವಣ್ಣ ನಿವಾಸದ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.ನಿನ್ನೆ ರಾತ್ರಿಯು ಕೂಡ ಮನೆ ಮುಂದೆ ಬಂದಿದ್ದ ಅಭಿಮಾನಿಗಳು ಜಮಾಯಿಸಿದ್ದರು…..