Breaking News

600 ಕ್ಕೂ ಹೆಚ್ಚು ಥೀಯೇಟರ್ ಗಳಲ್ಲಿ ಯಜಮಾನ..

ದರ್ಶನ್​,ರಶ್ಮಿಕಾ ಜೋಡಿ ಮೋಡಿಗೆ ಫ್ಯಾನ್ಸ್​ ಫಿದಾ....

SHARE......LIKE......COMMENT......

ಸಿನಿಮಾ:

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅಭಿನಯದ ಬಹುನಿರೀಕ್ಷಿತ ಯಜಮಾನ ಚಿತ್ರ ಇಂದು ತೆರೆಗಪ್ಪಳಿಸಿದೆ. 600 ಕ್ಕೂ ಹೆಚ್ಚು ಥೀಯೇಟರ್ ಗಳಲ್ಲಿ ಯಜಮಾನ ರಿಲೀಸ್ ಆಗಿದ್ದು, ಪ್ರೀತಿಯ ಯಜಮಾನನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಥಿಯೇಟರ್​ನತ್ತ ಧಾವಿಸಿ ಬರ್ತಿದ್ದಾರೆ.

ಚಿತ್ರದಲ್ಲಿ ದರ್ಶನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಸಖತ್ ಡುಯೇಟ್ ಹಾಡಿದ್ದು, ಬಹುಭಾಷಾ ನಟ ಠಾಕೂರ್​ ಅನೂಪ್ ಸಿಂಗ್​ ನೆಗೆಟಿವ್ ರೋಲ್​​ನಲ್ಲಿ ಮಿಂಚಿದ್ದಾರೆ. ಇನ್ನು ಯಜಮಾನ ಚಿತ್ರದ ಮೂಲಕ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಚಿತ್ರ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಜತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ವಿ. ಹರಿಕೃಷ್ಣ ಅವರೇ ಹೊತ್ತಿದ್ದಾರೆ.

ವಿಶೇಷ ಅಂದ್ರೆ ಚಿತ್ರದಲ್ಲಿ ದರ್ಶನ್ ಮಗ ವಿನೀಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದ್ದು, ಈ ಕಾರಣದಿಂದ ಮೆಜಿಸ್ಟಿಕ್ ರಸ್ತೆಯ ನರ್ತಕಿ ಥಿಯೇಟರ್ ಎದುರು, ದರ್ಶನ್ ಮಗ ವಿನೀತ್ ಕಟೌಟ್ ನಿಲ್ಲಿಸಲಾಗಿದೆ……