ಮುಂಬೈ:
ಮೊಬೈಲ್ ಉತ್ಪನ್ನಗಳ ಮೂಲಕ ನಂಬರ್ 1 ಸ್ಥಾನ ಪಡೆದಿದ್ದ ನೋಕಿಯಾ ಕಂಪನಿ, ವಿಂಡೋಸ್ ತಂತ್ರಾಂಶವನ್ನೇ ನೆಚ್ಚಿಕೊಂಡು ತನ್ನ ಮಾರುಕಟ್ಟೆ ಕುಗ್ಗಿಸಿಕೊಂಡಿತ್ತು. ಈಗ ತನ್ನ ಸರಕು ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸಲು ಎಚ್ಎಂಡಿ ಗ್ಲೋಬರ್ ಸಂಸ್ಥೆಯು 2018ರಲ್ಲಿ ಅತ್ಯಾಧುನಿಕ ಸೌಲಭ್ಯಯುಳ್ಳ ಹಲವು ಸ್ಮಾರ್ಟ್ ಫೋನ್ಗಳನ್ನು ಪರಿಚಯಿಸಿತ್ತು. 2019ಕ್ಕೆ ಮತ್ತಷ್ಟು ಕಂಪನಿಯು ಮತ್ತೊಂದು ಎತ್ತರಕ್ಕೆ ಏರಲು ವಿಶ್ವದ ಪ್ರಥಮ ಏಳು ಲೆನ್ಸ್ ಕ್ಯಾಮೆರಾ ಸ್ಮಾರ್ಟ್ ಮೊಬಲ್ ಅನ್ನು ಗ್ರಾಹಕರ ಕೈಗಿಡಲು ಸಜ್ಜಾಗಿದೆ.
ಸುಧಾರಿತ 845 ಪ್ರೊಸೆಸರ್, ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಂ, 5.9 ಇಂಚುಗಳ ಎಚ್‌ಡಿಆರ್ 10 ಕ್ಯೂಎಚ್‌ಡಿ ಡಿಸ್‌ಪ್ಲೇ, 6ಜಿಬಿ ರ್ಯಾಮ್, 128 ಜಿಬಿ ಸಂಗ್ರಹಣಾ ಸಮಾರ್ಥ್ಯ ಸೇರಿದಂತೆ ಹಲವು ಲಕ್ಷಣಗಳನ್ನು ನೋಕಿಯಾ 9 ಪ್ಯೂರ್ ಹೊಂದಿದೆ.
ನೋಕಿಯಾ 9 ಪ್ಯೂರ್‌ವ್ಯೂ ಹೆಸರಿನ 7 ಲೆನ್ಸ್ ಫೋನ್ ಜನವರಿ ಅಂತ್ಯದ ವೇಳೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ.ಮುಂಭಾಗದಲ್ಲಿ ಸಹ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ……