ಬೆಂಗಳೂರು:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 80 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿದೆ. ಕೆಐಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಅಶ್ವಥ್ನಾರಾಯಣ್ ತಿಳಿಸಿದ್ದಾರೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ನಂತರ ಮಾತ್ನಾಡಿದ ಡಿಸಿಎಂ, 23 ಎಕರೆಯಲ್ಲಿ ಥೀಮ್ ಪಾರ್ಕ್ ನಿರ್ಮಾಣ, ಬೆಂಗಳೂರು ಸುತ್ತಮುತ್ತ ಕೆಂಪೇಗೌಡ ಅಭಿವೃದ್ಧಿ ಪಡಿಸಿದ್ದ 46 ಸ್ಥಳಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು. ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದ್ದು, ಎಲ್ಲವೂ ಫೈನಲ್ ಆದ ನಂತರ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ರು. ಅಲ್ಲದೇ ಫಿಲ್ಮ್ ಸಿಟಿಯನ್ನು ರಾಮನಗರದ ಬದಲು ಬೆಂಗಳೂರಿನಲ್ಲೇ ನಿರ್ಮಿಸೋ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಅಶ್ವಥ್ನಾರಾಯಣ್ ಹೇಳಿದ್ದಾರೆ……