Breaking News

ಪ್ರವಾಹ ಪೀಡಿತ ಪ್ರದೇಶಕ್ಕೆ ಬಂದು ವ್ಯಕ್ತಿಯ ಬೆನ್ನೇರಿ ಕುಳಿತ BJP ಶಾಸಕ..!

ಪ್ರವಾಹದ ಪ್ರದೇಶ ನೋಡಲು ಶಾಸಕ ಶಿಬು ನಿರಾಕರಿಸಿದ್ದಾರೆ....

SHARE......LIKE......COMMENT......

ಬೆಂಗಳೂರು:

ಕೆಲವೊಮ್ಮೆ ಜನ ಪ್ರತಿನಿಧಿಗಳು (Peoples Representative) ಅತಿರೇಕವಾಗಿ ವರ್ತಿಸಿಬಿಡುತ್ತಾರೆ. ತಾವು ಎಲ್ಲಿದ್ದೇವೆ, ತಾವು ಬಂದಿದ್ದೇನಕ್ಕೆ, ಕರ್ತವ್ಯ ಏನು ಎಂಬುದನ್ನು ಮರೆತುಬಿಟ್ಟು ಜನರಿಂದ ಭಾರೀ ಟೀಕೆಗೊಳಗಾಗುತ್ತಾರೆ. ಸಿಲ್ಲಿ ಎನಿಸುವಷ್ಟರ ಮಟ್ಟಿಗೆ ವಿಚಿತ್ರವಾಗಿ ವರ್ತಿಸುವ ಜನಪ್ರತಿನಿಧಿಗಳು ಎಲ್ಲ ಕಡೆ ಸುದ್ದಿಯಾಗುತ್ತಾರೆ. ಇದೀಗ ಇಂಥದ್ದೇ ಒಂದು ಘಟನೆ ವರದಿಯಾಗಿದೆ. ಅಸ್ಸಾಂ ಶಾಸಕರೊಬ್ಬರು (MLA) ನೆರೆ ಪೀಡಿತ ಪ್ರದೇಶ (Flooded Area) ನೋಡಲು ಬಂದು ನೀರಿಗಿಳಿಯಲು ನಿರಾಕರಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಬಂದು ಈ ರೀತಿ ವರ್ತಿಸುವುದು ಒಬ್ಬ ಜನಪ್ರತಿನಿಧಿಗೆ ಖಂಡಿತಾ ಶೋಭೆ ತರುವದ್ದಲ್ಲ. ಹಾಗಾಗಿಯೇ ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ (Viral) ಆಗಿದ್ದು ತೀವ್ರ ಟೀಕೆಯನ್ನು ಎದುರಿಸುತ್ತಿದೆ.

ಅಸ್ಸಾಂನ ಬಿಜೆಪಿ ಶಾಸಕ (BJP MLA) ಶಿಬು ಮಿಶ್ರಾ (Shibu Mishra) ಅವರು ಲಂಬ್ಡಿಂಗ್ ಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಅಸ್ಸಾಂನಲ್ಲಿ (Assam) ಭೀಕರ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು ಪ್ರವಾಹದ ಪ್ರದೇಶ ನೋಡಲು ಬಂದ ಶಾಸಕ ಶಿಬು ಅವರು ನೀರಿಗೆ ಇಳಿಯಲು ನಿರಾಕರಿಸಿದ್ದಾರೆ. ನಂತರ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಶಾಸಕರನ್ನು ಬೆನ್ನಮೇಲೆ ಹೊತ್ತುಕೊಂಡು ಹೋಗಿದ್ದು ನೀರ ಒಂಚೂರು ತಾಗದಂತೆ ಶಾಸಕರು (MLA) ಕಾಲನ್ನು ಎತ್ತಿ ವ್ಯಕ್ತಿಯ ಬೆನ್ನುಕಚ್ಚಿ ಕುಳಿತಿದ್ದಾರೆ.

ಈ ಹಿಂದೆಯೂ ಕೆಲವು ಜನಪ್ರತಿನಿಧಿಗಳು ಈ ರೀತಿಯಾಗಿ ವರ್ತಿಸಿದ್ದು ಸುದ್ದಿಯಾಗಿತ್ತು. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗಿ ಮುಂದುವರಿದಿದ್ದು, 26 ಜಿಲ್ಲೆಗಳಲ್ಲಿ 1,089 ಕ್ಕೂ ಹೆಚ್ಚು ಹಳ್ಳಿಗಳು ಇನ್ನೂ ಮುಳುಗಡೆಯಾಗಿವೆ. ಪ್ರವಾಹ (Flood) ಮತ್ತು ಭೂಕುಸಿತದಿಂದ (Landslide) ರಾಜ್ಯದಲ್ಲಿ ಇದುವರೆಗೆ ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಚಾರ್‌ನಲ್ಲಿ ಇಬ್ಬರು ಮತ್ತು ಉದಲ್‌ಗುರಿಯಲ್ಲಿ ಒಬ್ಬರು ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡರೆ, ದಿಮಾ ಹಸಾವೊದಲ್ಲಿ ನಾಲ್ವರು ಮತ್ತು ಲಖಿಂಪುರದಲ್ಲಿ ಒಬ್ಬರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.

ಮಳೆಯಿಂದ ಅಸ್ಸಾಂ ಜನರ ಜೀವನ ಅಸ್ತವ್ಯಸ್ತ

ಕಳೆದ ಕೆಲವು ದಿನಗಳಿಂದ ಈಶಾನ್ಯ ರಾಜ್ಯದಲ್ಲಿ ಸಾವಿರಾರು ಜನರು ಬಾಧಿತರಾಗಿರುವುದರಿಂದ ಅಸ್ಸಾಂ (Assam) ಭಾರೀ ಮಳೆ ಮತ್ತು ಕೆಲವು ಭಾಗಗಳಲ್ಲಿ ಭೂಕುಸಿತದಿಂದ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ನಿರಂತರ ಮಳೆಯಿಂದಾಗಿ (Raining) ಅಸ್ಸಾಂನ 12 ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿದ್ದರೆ, ಕಚಾರ್ ಜಿಲ್ಲೆಯ ಮಗು ಸೇರಿದಂತೆ ಮೂವರು ಭಾನುವಾರದಿಂದ ನಾಪತ್ತೆಯಾಗಿದ್ದಾರೆ (Missing) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಮತ್ತು ಭೂಕುಸಿತ

ಶನಿವಾರ ಮುಂಜಾನೆ ಗುವಾಹಟಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್‌ನಲ್ಲಿ ಭೂಕುಸಿತದಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬೃಹತ್ ಭೂಕುಸಿತಗಳು ಮತ್ತು ಜಲಾವೃತವು ರಾಜ್ಯದ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ. ರೈಲ್ವೆ ಹಳಿ, ಸೇತುವೆಗಳು ಮತ್ತು ರಸ್ತೆಗಳು ಹಾನಿಯಾಗಿವೆ……