ಸ್ಯಾಂಡಲ್‌ವುಡ್:
ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಶಿವರಾಜ್ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಸಹೋದರನ ಚಿತ್ರಕ್ಕೆ ಶಿವಣ್ಣ ವಾಯ್ಸ್ ಕೊಟ್ಟಿದ್ದು, ಅಪ್ಪು ಇಲ್ಲದೇ ವಾಯ್ಸ್ ಕೊಡೋದು ತುಂಬಾ ಕಷ್ಟ ಎಂದಿದ್ದಾರೆ. ನಿನ್ನೆ ಡಬ್ ಮಾಡಿದ್ವಿ, ಏನೋ ಪ್ರಯತ್ನ ಮಾಡಿದ್ದೀನಿ, ಜೆಮ್ಸ್ ಇಡೀ ಸಿನಿಮಾಗೆ ವಾಯ್ಸ್ ಕೊಟ್ಟಿದ್ದೀನಿ. ಸದ್ಯದಲ್ಲೇ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಅಂತಾ ಶಿವಣ್ಣ ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನದಂದು ಅಂದ್ರೆ ಮಾರ್ಚ್ 17ರಂದು ಜೇಮ್ಸ್ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ.