ಬೆಂಗಳೂರು:
ರಾಜ್ಯದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗ್ತಿದ್ದು, ಹೇರಲಾಗಿದ್ದ ಟಫ್ ರೂಲ್ಸ್ಗಳನ್ನ ರಾಜ್ಯ ಸರ್ಕಾರ ರದ್ದು ಮಾಡಿದೆ. ಹೀಗಾಗಿ, ಅರ್ಧಕ್ಕೆ ನಿಲ್ಲಿಸಲಾಗಿದ್ದ ಪಾದಯಾತ್ರೆಯನ್ನ ಮತ್ತೆ ಶುರು ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆಯನ್ನ ಫೆಬ್ರವರಿ 18ರಿಂದ ಶುರು ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಸದ್ಯ ರಾಜ್ಯದಲ್ಲಿ ಫೆಬ್ರವರಿ 15ರವರೆಗೆ ಕೊರೋನಾ ಗೈಡ್ಲೈನ್ಸ್ ಇದೆ. ಅದ್ರ ಪ್ರಕಾರ ಪ್ರತಿಭಟನೆ, ಱಲಿ ನಡೆಸುವಂತಿಲ್ಲ. ಫೆಬ್ರವರಿ 15ರ ಬಳಿಕ ಬಹುತೇಕ ಗೈಡ್ಲೈನ್ಸ್ ಬದಲಾಗುವ ಸಾಧ್ಯತೆಯಿದ್ದು, ಫೆಬ್ರವರಿ 18ರಿಂದ ಪಾದಯಾತ್ರೆಗೆ ಕಾಂಗ್ರೆಸ್ ಪ್ಲಾನ್ ಮಾಡಿದೆ. ಇನ್ನು, ಕೊರೋನಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆ ರದ್ದಾಗಿತ್ತು. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದ ಕಾಂಗ್ರೆಸ್ ಕೊರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಿತ್ತು.
ಮೇಕೆದಾಟು ಪಾದಯಾತ್ರೆಗೆ ಮತ್ತೆ ಕಾಂಗ್ರೆಸ್ ಪ್ಲಾನ್ ..!
ಫೆಬ್ರವರಿ 18ರಿಂದ ಶುರು ಮಾಡಲು ತಯಾರಿ.....
