ನವದೆಹಲಿ:
ಬಜೆಟ್‌ಗೂ ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದು ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ ಮಾಡಿದೆ.ಯೆಸ್ ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 1.46 ರು.ಗಳ ಕಡಿತ ಮಾಡಿದ್ದು ಇದು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇದರೊಂದಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ 493.53 ರುಪಾಯಿಗೆ ಸಿಗಲಿದೆ. ಇನ್ನು ಸಬ್ಸಿಡಿ ರಹಿತ ಎಲ್‌ಪಿಜಿ ದರ 30 ರುಪಾಯಿ ಕಡಿಮೆ ಮಾಡಲಾಗಿದ್ದು ಸದ್ಯದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 659 ರುಪಾಯಿ ಆಗಿದೆ…..