Breaking News

KGF ಅಖಾಡಕ್ಕೆ ಪೈಲ್ವಾನ್ ಎಂಟ್ರಿ..!

8 ಭಾಷೆಯ ಟಿವಿ ರೈಟ್ಸ್ ಗೆ 30 ಕೋಟಿ ಆಫರ್....

SHARE......LIKE......COMMENT......

ಸಿನಿಮಾ:

ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಪೈಲ್ವಾನ್ ಚಿತ್ರದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ದುಪ್ಪಟ್ಟಾಗುತ್ತಿವೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡು ಧೂಳೆಬ್ಬಿಸುತ್ತಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಇದೀಗ ಮತ್ತೊಂದು ಬಹುಭಾಷಾ ಸಿನಿಮಾ ಅಷ್ಟೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದು,ಕಳೆದ ವಾರ ತೆರೆಕಂಡ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರದ ಹವಾ ಮುಂದುವರೆದಿರುವಂತೆಯೇ ಸುದೀಪ್ ಅಭಿನಯದ ಪೈಲ್ವಾನ್ ನೂತನ ದಾಖಲೆ ಬರೆಯಲು ಸಜ್ಜಾಗಿದೆ.

ಹೌದು.. ಪೈಲ್ವಾನ್ ಚಿತ್ರವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲು ದೇಶದ ದೊಡ್ಡ ದೊಡ್ಡ ಸಂಸ್ಥೆಗಳು ಆಫರ್ ನೀಡಲು ಮುಂದಾಗಿದ್ದು, ಎಲ್ಲಾ ಎಂಟು ಭಾಷೆಯಲ್ಲಿ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲು ಪ್ರತಿಷ್ಠಿತ ಕಂಪನಿಯೊಂದು ಬರೋಬ್ಬರಿ 30 ಕೋಟಿ ಆಫರ್ ನೀಡಿದೆಯಂತೆ. ಈ ಬಗ್ಗೆ ಸ್ವತಃ ಚಿತ್ರ ನಿರ್ದೇಶಕ ಕೃಷ್ಣ ಅವರು ಮಾಹಿತಿ ನೀಡಿದ್ದು, ಒಂದು ವೇಳೆ ಈ ಒಪ್ಪಂದ ಸಾಧ್ಯವಾಗಿದ್ದೇ ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ಬೃಹತ್ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾದ ಮೊದಲ ಚಿತ್ರ ಎಂಬ ಖ್ಯಾತಿಗೆ ಪೈಲ್ವಾನ್ ಪಾತ್ರವಾಗಲಿದೆ.ಕನ್ನಡ ಚಿತ್ರವೊಂದಕ್ಕೆ ಇದುವರೆಗೂ ಬಂದಿರುವ ಅತಿದೊಡ್ಡ ಟಿವಿ ರೈಟ್ಸ್ ಆಫರ್ ಇದಾಗಿದೆ……