ಹೆಲ್ತ್ ಟಿಪ್ಸ್:
Benefits of Dates : ಮಹಿಳೆಯರಿಗೆ ಈ ಸಮಯದಲ್ಲಿ 6 ಖರ್ಜೂರ ತುಂಬಾ ಪ್ರಯೋಜನಕಾರಿ. ಎಫ್ ಡಿಎ ಪ್ರಕಾರ, ಖರ್ಜೂರದಲ್ಲಿ ಆರೋಗ್ಯಕರ ಕೊಬ್ಬುಗಳು, ಸೋಡಿಯಂ, ಆಹಾರದ ಫೈಬರ್, ನೈಸರ್ಗಿಕ ಸಕ್ಕರೆ, ಪ್ರೋಟೀನ್, ವಿಟಮಿನ್ ಡಿ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಆರೋಗ್ಯಕ್ಕೆ ಖರ್ಜೂರವು ಸೂಪರ್‌ಫುಡ್ ಆಗಿದ್ದು, ಇವುಗಳನ್ನು ತಿನ್ನುವ ಮೂಲಕ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮಹಿಳೆಯರಿಗೆ ಖರ್ಜೂರದ ಸೇವನೆಯು ನಿರ್ದಿಷ್ಟ ಸಮಯದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
ಗರ್ಭಾವಸ್ಥೆ(Pregnancy)ಯಲ್ಲಿ ಹೆರಿಗೆ ನೋವು ತುಂಬಾ ಗಂಭೀರವಾಗಿದೆ. ಆದರೆ ತಜ್ಞರ ಪ್ರಕಾರ, ಖರ್ಜೂರ ಸೇವನೆಯು ಹೆರಿಗೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಖರ್ಜೂರ ಸೇವನೆಯು ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೆಲ್ತ್‌ಲೈನ್ ವರದಿ ತಿಳಿಸುತ್ತದೆ. ಈ ಕಾರಣದಿಂದಾಗಿ ಗರ್ಭಕಂಠದಲ್ಲಿ ನಮ್ಯತೆ ಮತ್ತು ಹಿಗ್ಗುವಿಕೆ ಇರುತ್ತದೆ ಮತ್ತು ಹೆರಿಗೆ ನೋವಿನ ಸಮಯದಲ್ಲಿ ಕಡಿಮೆ ನೋವನ್ನು ಎದುರಿಸಬೇಕಾಗುತ್ತದೆ. ಸಂಶೋಧನೆಯಿಂದ ಈ ಮಾಹಿತಿ ಹೊರಬಿದ್ದಿದ್ದು, ಗರ್ಭಾವಸ್ಥೆಯಲ್ಲಿ ಪ್ರತಿನಿತ್ಯ 6 ಖರ್ಜೂರವನ್ನು ಸೇವಿಸಿದ ಮಹಿಳೆಯರಿಗೆ ಹೆರಿಗೆ ನೋವು ಕಡಿಮೆಯಾಗುತ್ತದೆ……